ಕಿಡ್ನಿ, ಲಿವರ್, ಹೃದಯ ಬಿಕಿರಿಗಿಟ್ಟ ಹರೀಶ್ ರಾಜ್

ಚಿತ್ರದ ನಿರ್ಮಾಪಕ ಎಂ ಮುರಳಿ ಅವರು ಹರೀಶ್ ಅವರನ್ನು ಹಣ ಕೇಳಿದರಂತೆ. ಅದಕ್ಕೆ ಹರೀಶ್ ರಾಜ್ ಹೇಳಿದ್ದೇನೆಂದರೆ; ಕಿಡ್ನಿ, ಹೃದಯ, ಲಿವರ್ ಏನೂ ಬೇಕಾದ್ರು ತಗೊಳ್ಳಿ ಆದರೆ ನಯಾ ಪೈಸೆ ಹಣವೂ ನನ್ನಲ್ಲಿಲ್ಲ ಎಂದಿದ್ದಾರೆ. 'ಗನ್' ಚಿತ್ರಕ್ಕೆ ಮುರಳಿ ಸಾಲ ಕೊಟ್ಟಿದ್ದರು. ಆದರೆ 'ಗನ್' ಚಿತ್ರ ಬಾಕ್ಸಾಫೀಸಲ್ಲಿ ಮಕಾಡೆ ಮಲಗಿ ಹರೀಶ್ ರಾಜ್ ಕೂಡ ರಗ್ಗು ಹೊದ್ದು ಮಲಗುವಂತಾಗಿತ್ತು.
ಏತನ್ಮಧ್ಯೆ ಹರೀಶ್ ರಾಜ್ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದರು. ಅದೇನಪ್ಪಾ ಅಂದ್ರೆ 'ಗನ್' ಚಿತ್ರದ ಹಕ್ಕುಗಳನ್ನು ಆ ಚಿತ್ರದ ನಿರ್ಮಾಪಕರಿಗೆ ಗೊತ್ತಿಲ್ಲದಂತೆ ಮಾರಾಟ ಮಾಡಲು ಹೊರಟಿದ್ದು. ಈ ಸಂಬಂಧ ಹರೀಶ್ ರಾಜ್ ಅವರನ್ನುಹೈಗ್ರೌಂಡ್ ಠಾಣೆಯ ಪೊಲೀಸರು ಬಂಧಿಸಿದ್ದರು.
ಈಗ ಸಾಲ ತೀರಿಸಲು ಮುಂದಾಗಿರುವ ಹರೀಶ್ ಕಾಲ್‌ಸೆಂಟರ್ ಒಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದಾರಂತೆ. ಆದರೆ ಮುರಳಿ ಮಾತ್ರ ಹರೀಶ್ ಬೆನ್ನ ಹಿಂದೆ ಬಿದ್ದಿದ್ದು ಸಾಲ ತೀರಿಸುವಂತೆ ದುಂಬಾಲು ಬಿದ್ದಿದ್ದಾರಂತೆ. ಮುರಳಿ ಅವರ ಕಿರಿಕಿರಿಗೆ ಸೋತು ಸುಣ್ಣವಾಗಿರುವ ಹರೀಶ್ ನನ್ನ ಬಳಿ ಹಣವಿಲ್ಲ. ಬೇಕಾದರೆ ಕಣ್ಣು, ಲಿವರ್, ಹೃದಯ, ಕಿಡ್ನಿ ತೆಗೆದುಕೊಳ್ಳಿ ಎಂದು ಹತಾಶೆಯಿಂದ ಹೇಳಿದ್ದಾರಂತೆ. (ಏಜೆನ್ಸೀಸ್)


Click it and Unblock the Notifications











