ಭಾಗ್ಯದ ಬಳೆಗಾರನಾಗಿ ಶಿವರಾಜ್ ಕುಮಾರ್

ಸುಮಧುರ ಗೀತೆಗಳು, ಗ್ರಾಮೀಣ ನೇಪಥ್ಯ ಈ ಚಿತ್ರದ ಪ್ಲಸ್ ಪಾಯಿಂಟ್.ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 'ಭಾಗ್ಯದ ಬಳೆಗಾರ' ಮೇಲುಕೋಟೆ, ಕೊಳ್ಳೆಗಾಲ, ಮಂಡ್ಯ, ಮೈಸೂರಿನಲ್ಲಿ 75 ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಈ ಸುಂದರ ಸ್ಥಳಗಳ ಪ್ರಕೃತಿ ಸೊಬಗನ್ನು ಪಿಕೆಎಚ್ ದಾಸ್ ತಮ್ಮ ಕ್ಯಾಮೆರಾ ಕಣ್ಣಲ್ಲಿ ಬಂಧಿಸಲಿದ್ದಾರೆ.
ತವರಿನ ಸಿರಿ, ತವರಿಗೆ ಬಾ ತಂಗಿ, ತವರಿನ ತೊಟ್ಟಿಲು ಹಾಗೂ ನಂದಾ ಲವ್ಸ್ ನಂದಿತಾ ಯಶಸ್ವಿ ಚಿತ್ರಗಳಿಗೆ ಕಥೆ ಒದಗಿಸಿದ್ದ ಅಜಯ್ ಕುಮಾರ್ ಈ ಚಿತ್ರಕ್ಕೂ ಕಥೆ, ಚಿತ್ರಕಥೆ ಬರೆದಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ನಾಗೇಂದ್ರ ಪ್ರಸಾದ್, ಆನಂದ್ ಗೀತರಚನೆ ಹಾಗೂ ಪಿ.ಆರ್.ಸೌಂದರರಾಜ್ ಸಂಕಲನ ಈ ಚಿತ್ರಕ್ಕಿದೆ. ಚಿತ್ರದ ಉಳಿದ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications