ಶೀರ್ಷಿಕೆ ವಿವಾದಕ್ಕೆ ಮಂಗಳ ಹಾಡಿದರು ಸುದೀಪ್

ಶೀರ್ಷಿಕೆ ವಿವಾದದಿಂದ ಸುದ್ದಿಯಾಗಿರುವ 'ವರದನಾಯಕ' ಚಿತ್ರದ ಪತ್ರಿಕಾಗೋಷ್ಠಿಗೆ ಅವಸರದಲ್ಲಿ ಬಂದು ಹೋದರೂ ನಟ ಸುದೀಪ್ ಸಾಕಷ್ಟು ಮಾತನಾಡಿದ್ದಾರೆ. ಸುದೀಪ್ ವರದನಾಯಕದಲ್ಲಿ ಅಭಿನಯಿಸುತ್ತಾರೋ ಇಲ್ಲವೋ ಎಂಬ ಗೊಂದಲದಲ್ಲಿದ್ದ ಗಾಂಧಿನಗರಕ್ಕೆ, ಸುದೀಪ್ "ಬಂದೇ ಬರುತ್ತೇನೆ" ಎನ್ನುವ ಮೂಲಕ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಲ್ಲಿಗೆ ಚಿತ್ರತಂಡ ಫುಲ್ ಖುಷ್.

ಸುದೀಪ್ ಬರುತ್ತಾರೆಂದು ಖಾತ್ರಿಯಾಗುತ್ತಿದ್ದಂತೆ ವರದನಾಯಕ ಚಿತ್ರತಂಡ ಸಂಭ್ರಮಗೊಂಡಿದೆ. ಚಿರು ನಾಯಕತ್ವದ ಚಿತ್ರವಾದರೂ ಅವರ ಅಣ್ಣನಾಗಿ ಅಭಿನಯಿಸಲು ಒಪ್ಪೊಕೊಂಡ ಸುದೀಪ್ ದೊಡ್ಡತನವನ್ನು ಎಲ್ಲರೂ ಕೊಂಡಾಡಿದರು. ಚಿರು ಅಭಿನಯವನ್ನು ಸುದೀಪ್ ಕೂಡ ಮೆಚ್ಚಿಕೊಂಡರು. ಜೊತೆಗೆ ಗ್ಲಾಮರ್ ಗೊಂಬೆ ನಿಕಿಶಾ ಪಟೇಲ್ ಚಿರುಗೆ ಒಳ್ಳೆಯ ಜೋಡಿ ಎಂದು ಹೇಳಿ ಸುದೀಪ್ ಅಚ್ಚರಿ ಮೂಡಿಸಿದರು.

ವರದನಾಯಕ ಚಿತ್ರದ ಶೀರ್ಷಿಕೆ ವಿವಾದ ಬಗೆಹರಿದಿದೆ ಎಂದಿತು ಚಿತ್ರತಂಡ. ಚಲನಚಿತ್ರ ವಾಣಿಜ್ಯಮಂಡಳಿಯಿಂದ ಬಂದ ಒಪ್ಪಿಗೆಯ ನಂತರವೇ ಮುಂದುವರಿಯುತ್ತಿರುವುದಾಗಿ ಹೇಳಿಕೊಂಡರು ಸುದೀಪ್ ಮತ್ತು ಶಂಕರೇಗೌಡ. ನಿರ್ದೇಶಕ, ಡೈಲಾಂಗ್ ಕಿಂಗ್ ಸಾಯಿಕುಮಾರ್ ಸಹೋದರ 'ಅಯ್ಯಪ್ಪ' ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸುದೀಪ್ ಆಗಮನ ಚಿತ್ರಕ್ಕೆ ಆನೆಬಲ ತಂದಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Kichcha Sudeep acts in Movie Varadanayaka. He confirmed the entry and told that after the completion of Telugu movie 'Iga', he joins the varadanayaka team. 
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X