ದ್ವಿತೀಯ ಪಿಯುಸಿ ಫಸ್ಟ್ ಕ್ಲಾಸ್‌ನಲ್ಲಿ ಅಮೂಲ್ಯ ಪಾಸ್!

By Rajendra

ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಫಸ್ಟ್ ಕ್ಲಾಸ್‌‍ನಲ್ಲಿ ಪಾಸಾಗಿದ್ದ ನಟಿ ಅಮೂಲ್ಯ ಈಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ಅತ್ಯಧಿಕ ಅಂಕಗಳಿಂದ ಪಾಸಾಗಿದ್ದಾರೆ. ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅಮೂಲ್ಯ ಶೇ.79 ಅಂಕಗಳನ್ನು ಪಡೆದಿದ್ದಾರೆ. ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಯಾದ ಈಕೆ ಮುಂದೆ ಬಿ.ಕಾಂಗೆ ಸೇರ್ತೀನಿ ಎಂದಿದ್ದಾರೆ.

ಅಮೂಲ್ಯ ಅವರು ಮಾತನಾಡುತ್ತಾ, ತುಂಬಾ ಖುಷಿಯಾಗುತ್ತಿದೆ. ಮುಂದೆ ಇದೇ ಕಾಲೇಜಿನಲ್ಲಿ ಬಿ.ಕಾಂ ಮಾಡ್ತೀನಿ. ಶೇ.80ರಷ್ಟು ಅಂಕಗಳನ್ನು ನಿರೀಕ್ಷಿಸಿದ್ದೆ. ಆದರೆ ಶೇ.79ಕ್ಕೆ ತೃಪ್ತಿಪಡಬೇಕಾಯಿತು ಎಂದಿದ್ದಾರೆ. ಸಿನಿಮಾ ಚಿತ್ರೀಕರಣ, ಚಿತ್ರರಂಗಕ್ಕೆ ಸಂಬಂಧಪಟ್ಟ ವಿವಾದಗಳು, ಪುಂಡ ಪ್ರೇಮಿಯ ಕಾಟ ಇವೆಲ್ಲ ಜಂಜಾಟಗಳ ನಡುವೆಯೂ ಅಮೂಲ್ಯ ಉತ್ತಮ ಅಂಕಗಳನ್ನು ಗಳಿಸಿರುವುದು ನಿಜಕ್ಕೂ ಅಭಿನಂದನಾರ್ಹ.

ನಿಮ್ಮ ಆಸಕ್ತಿ ಚಿತ್ರರಂಗವೇ ಅಥವಾ ಶಿಕ್ಷಣವೇ? ಎಂದು ಕೇಳಿದರೆ. ಶಿಕ್ಷಣ ಮತ್ತು ಸಿನಿಮಾ ಎರಡು ನನ್ನ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ತರಹ ಆಗಬಾರದು. ಎರಡು ನನ್ನ ಮೆಚ್ಚಿನ ಕ್ಷೇತ್ರಗಳು. ಹಾಗಾಗಿ ಶಿಕ್ಷಣದೊಂದಿಗೇ ಸಿನಿಮಾಗಳು ಮುಂದುವರಿಯಲಿದೆ ಎನ್ನ್ನುತ್ತಾರೆ. ಸದ್ಯಕ್ಕೆ ಅಮೂಲ್ಯ ಅಭಿನಯದ ಮನಸಾಲಜಿ ಚಿತ್ರ ಬಿಡುಗಡೆಯಾಗಬೇಕಿದೆ. ಇತ್ತೀಚೆಗಷ್ಟೆ ಚಿತ್ರದ ಆಡಿಯೋ ಬಿಡುಗಡೆಯಾಗಿತ್ತು. (ದಟ್ಸ್ ಕನ್ನಡ ಸಿನಿ ವಾರ್ತೆ)

More from Filmibeat

English summary
The beautiful teenage Kannada actress Amoolya passed II PUC exam with first class. At present she has studying in Mount Carmel College and got 79% in commerce. Earlier she had acted in Cheluvina Chittara and Chaitrada Chandrama, Naanu Nanna Kanasu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X