ನಟಿ ಖುಷ್ಬು ಬ್ಯಾಗ್ ಜೊತೆಗೆ ಎರಡು ಮೊಬೈಲ್ ಕಳುವು
ನಟಿ ಖುಷ್ಬು ಎರಡು ದುಬಾರಿ ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಿದ್ದಾರೆ. ಚೆನ್ನೈನ ಅಣ್ಣಾ ಸಲೈನಲ್ಲಿ ಶಾಪಿಂಗ್ ಮಾಡುತ್ತಿರಬೇಕಾದರೆ ಈಕೆಯ ಬ್ಯಾಗ್ ಜೊತೆಗೆ ಎರಡು ಹೈ ಎಂಡ್ ಮೊಬೈಲ್ ಫೋನ್‌ಗಳು ಕಳುವಾಗಿವೆ.
ಈ ಸಂಬಂಧ ಖುಷ್ಬು ತಮ್ಮ ಮ್ಯಾನೇಜರ್ ಮುಖಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಮೊಬೈಲ್ ಕಳ್ಳರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ. ಡಿವಿಡಿಗಳನ್ನು ಕೊಳ್ಳುವ ಸಲುವಾಗಿ ಖುಷ್ಬು ತಮ್ಮ ಮ್ಯಾನೇಜರ್ ಅನ್ಬು ಜೊತೆ ಶಾಪಿಂಗ್ ಮಾಲ್‌ಗೆ ಬಂದಿದ್ದರು.
ಸೆಲ್‌ಫೋನ್‌ಗಳಿದ್ದ ತನ್ನ ಬ್ಯಾಗನ್ನು ಎಂಟ್ರನ್ಸ್ ಬಳಿ ಇಟ್ಟು ಡಿವಿಡಿ ಹುಡುಕಲು ಹೋಗಿದ್ದಾರೆ. ಬಂದು ನೋಡುವಷ್ಟರಲ್ಲಿ ಬ್ಯಾಗ್ ಮಾಯ! ಟೇಬಲ್ ಮೇಲೆ ಕೆಳಗೆ ಎಲ್ಲಿ ಹುಡುಕಿದರೂ ಬ್ಯಾಗ್ ಪತ್ತೆಯಿಲ್ಲ. ಬಳಿಕ ಪೊಲೀಸರ ಮೊರೆ ಹೋಗಿ ದೂರು ದಾಖಲಿಸಿದ್ದಾರೆ. ಖುಷ್ಬು ಶಾಪಿಂಗ್ ಮಾಡುತ್ತಿರಬೇಕಾದರೆ ಎಂಟ್ರನ್ಸ್ ಬಳಿ ಇಬ್ಬರು ನಿಂತಿದ್ದರಂತೆ. ಅವರೇ ಖುಷ್ಬು ಬ್ಯಾಗ್ ಕಳ್ಳರು ಎಂದು ಶಂಕಿಸಲಾಗಿದೆ. (ಏಜೆನ್ಸೀಸ್)
More from Filmibeat
English summary
South Indian actress Kushboo lost her two hi-end mobile phones while shopping in a mall on Anna Salai in Chennai this weekend. A complaint has been filed with the police by her manager, and investigations are on to catch the culprits.


Click it and Unblock the Notifications











