ಮತ್ತೆ ದರ್ಶನ್ ಜೊತೆಯಾದ ಪೊರ್ಕಿ ಪ್ರಣೀತಾ!

praneetha
ನಟಿ ಪ್ರಣೀತಾ ಪೊರ್ಕಿಯಲ್ಲ. ಆದರೂ 'ಪೊರ್ಕಿ ಪ್ರಣೀತಾ' ಎಂದೇ ಈಕೆ ಕರ್ನಾಟಕದಲ್ಲಿ ಫೇಮಸ್. 'ಪೋರ್ಕಿ' ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಮೇಲೆ ಅದು ಸಹಜ ಎಂಬುದು ಪ್ರಣೀತಾಗೂ ಗೊತ್ತು! ನಂತರ 'ಜರಾಸಂಧ' ದಲ್ಲಿ ದುನಿಯಾ ವಿಜಯ್ ಗೆ ಜೊತೆಯಾಗಿದ್ದಾರೆ. 'ಬೀಮಾತೀರದಲ್ಲಿ' ಎಂಬ ಹೊಸ ಚಿತ್ರ ಕೂಡ ಕೈನಲ್ಲಿದೆ. ಇದೀಗ 'ಸ್ನೇಹಿತರು' ಲಿಸ್ಟ್ ಗೆ ಹೊಸ ಸೇರ್ಪಡೆ.

ಗೀತಸಾಹಿತಿ ರಾಮ್ ನಾರಾಯಣ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ 'ಸ್ನೇಹಿತರು' ಚಿತ್ರಕ್ಕೆ ಮೊದಲು ಕೇಳಿಬಂದ ಹೆಸರು ರಮ್ಯಾ ಅಥವಾ ತ್ರಿಶಾ. ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ಅದು ಪ್ರಣೀತಾ ಕೈಸೇರಿದೆ. ಈ ಚಿತ್ರದಲ್ಲಿ ಐದು ಜನ ಹೀರೋಗಳು. ಅವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಪ್ರಮುಖ ಆಕರ್ಷಣೆ. ಅವರದು ಅತಿ ಪ್ರಮುಖ ಅತಿಥಿ ಪಾತ್ರವಂತೆ.

ಉಳಿದಂತೆ ವಿಜಯ ರಾಘವೆಂದ್ರ, ತರುಣ್, ಸೃಜನ್ ಲೋಕೇಶ್ ಹಾಗೂ ರವಿಶಂಕರ್ (ಪಯಣ), ಹೀರೋಗಳು. ಈ ಸ್ಟಾರ್ ಮತ್ತು ಮಲ್ಟಿ ಹೀರೋಗಳ ಚಿತ್ರಗಳನ್ನು ನಿರ್ಮಿಸುತ್ತಿರುವವರು ಸೌಂದರ್ಯಾ ಜಗದೀಶ್. ಈ ಮೊದಲು 'ಮಸ್ತ್ ಮಜಾ ಮಾಡಿ' ಎಂಬ ಇದೇ ಮಾದರಿಯ 'ಹಿಟ್' ಸಿನಿಮಾ ಕೊಟ್ಟಿದ್ದರು. ಈಗಾಗಲೇ 'ಅಪ್ಪು-ಪಪ್ಪು' ಮೂಲಕ ಜನರಿಗೆ ಪರಿಚಿತವಾಗಿರುವ ಅವರ ಮಗ ಮಾ| ಸ್ನೇಹಿತ್ ಕೂಡ ಇದರಲ್ಲಿರುವುದು ವಿಶೇಷ.

"ಇದೊಂದು ಗೆಳೆಯರ ನಡುವಿನ ಸ್ಟೋರಿ. ಇದಕ್ಕಾಗಿ ಸತತ ಒಂದು ವರ್ಷದಿಂದ ತಯಾರಿ ನಡೆಸಿದ್ದೇನೆ. ಈ ಚಿತ್ರಕ್ಕೆ 'ಮಹಾಭಾರತ' ಸ್ಪೂರ್ತಿ. ಕಥೆ ಹಾಗೂ ನಟರ ಮೇಲೆ ನನಗೆ ಎಲ್ಲಿಲ್ಲದ ಭರವಸೆ. ಅಗತ್ಯಗಳನ್ನು ಪೂರೈಸಲು ರೆಡಿ ಇರುವ ನಿರ್ಮಾಪಕರು ಬೆನ್ನಿಗಿದ್ದಾರೆ. ಇನ್ನೇನು ಬೇಕು? ಅಕ್ಟೋಬರ್ 20 ರಂದು ಮಹೂರ್ತ" ಎಂದಿದ್ದಾರೆ, ಈ ಚಿತ್ರದ ಮೂಲಕ 'ನಿರ್ದೇಶಕ'ರಾಗಲಿರುವ ರಾಮ್ ನಾರಾಯಣ್.

More from Filmibeat

English summary
Actress Praneetha is Selected as Heroine for Kannada Movie 'Snehitharu'. instead of Ramya or Trisha. Famous Lyric Writer Ram Narayan Directs this movie. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X