ರಜನಿಕಾಂತ್ 'ಚಂದ್ರಮುಖಿ'ಯಾಗಿ ತಾರೆ ಪ್ರಿಯಾಮಣಿ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಚಂದ್ರಮುಖಿ' (2004) ಚಿತ್ರ ಅದ್ಭುತ ಯಶಸ್ಸು ಕಂಡಿತ್ತು. ಪಿ ವಾಸು ಈಗ 'ಚಂದ್ರಮುಖಿ ಭಾಗ 2'ನ್ನು ತೆಗೆಯಲು ಸಿದ್ಧರಾಗಿದ್ದಾರೆ. ಆದರೆ ಈ ಬಾರಿ ಚಂದ್ರಮುಖಿ ಸ್ಥಾನಕ್ಕೆ ಪ್ರಿಯಾಮಣಿ ಅವರನ್ನು ಆಯ್ಕೆ ಮಾಡಿಕೊಳ್ಳಲು ವಾಸು ನಿರ್ಧರಿಸಿದ್ದಾರೆ.
'ಚಂದ್ರಮುಖಿ' ಚಿತ್ರದಲ್ಲಿ ಜ್ಯೋತಿಕಾ ಈ ಪಾತ್ರವನ್ನು ಪೋಷಿಸಿದ್ದರು. ಈಗ ಪ್ರಿಯಾಮಣಿ ಅದೇ ರೀತಿಯ ಪಾತ್ರವನ್ನು ಪೋಷಿಸಲಿದ್ದಾರೆ. ಚಂದ್ರಮುಖಿ 2 ಚಿತ್ರಕ್ಕೆ ರಜನಿಕಾಂತ್ ಕೂಡ ತಮ್ಮ ಒಪ್ಪಿಗೆ ಸೂಚಿಸಿದ್ದು, ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ. ನಾಗವಲ್ಲಿ ಪಾತ್ರಕ್ಕೆ ಬೊಗಸೆಗಣ್ಣಿನ ಚೆಲುವೆ ಪ್ರಿಯಾಮಣಿ ಮತ್ತಷ್ಟು ಸತ್ವ ತುಂಬಲಿದ್ದಾರೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
'ಆಪ್ತಮಿತ್ರ' ಚಿತ್ರದಲ್ಲಿ ಸೌಂದರ್ಯ ನಾಗವಲ್ಲಿಯಾಗಿ ಗಮನಸೆಳೆದಿದ್ದರು. ಮಲಯಾಳಂನ 'ಮಣಿಚಿತ್ರತಾಳ್'' ರೀಮೇಕ್ ಆದ ಚಿತ್ರ ಕನ್ನಡ ಸೇರಿದಂತೆ ತಮಿಳು, ತೆಲುಗಿನಲ್ಲೂ ಭರ್ಜರಿ ಯಶಸ್ಸಿ ಸಾಧಿಸಿತ್ತು. ಅಂದಹಾಗೆ ಪ್ರಿಯಾಮಣಿ ಅಭಿನಯದ ಕೋ ಕೋ ಚಿತ್ರ ಶುಕ್ರವಾರ (ಜ.13) ಬಿಡುಗಡೆಯಾಗುತ್ತಿದೆ. (ಏಜೆನ್ಸೀಸ್)


Click it and Unblock the Notifications











