ಶ್ರೀಮತಿ ರಾಧಿಕಾ ಕುಮಾರಸ್ವಾಮಿ ಏನ್ ಲಕ್ಕಿ ಮಗಾ!

By Rajendra

Actress Radhika Kumaraswamy
ಕನ್ನಡ ಚಿತ್ರರಂಗದ ನಟಿ ಕಮ್ ನಿರ್ಮಾಪಕಿ ಶ್ರೀಮತಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಶುಕ್ರವಾರ (ನ.11) ಹುಟ್ಟುಹಬ್ಬ ಸಂಭ್ರಮ. ಉತ್ತಮ ಕಲಾವಿದೆಯಾದ, ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಕಂಡಿರುವ ರಾಧಿಕಾ ಈಗ ಒಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆಕೆಯ ಅಭಿಮಾನಿಗಳು ಇಂದಿಗೂ ರಾಧಿಕಾರನ್ನು ಆರಾಧಿಸುತ್ತಾರೆ.

ಸದ್ಯಕ್ಕೆ ರಾಧಿಕಾ ನಿರ್ಮಿಸುತ್ತಿರುವ ಲಕ್ಕಿ ಚಿತ್ರದ ಚಿತ್ರೀಕರಣ ಮುಗಿದಿದೆ. ಇಂದಿನ ಪತ್ರಿಕೆಗಳಲ್ಲಿ ರಾಧಿಕಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಯಶ್ ಚಿತ್ರದ ನಾಯಕ ನಟನಾಗಿರುವ ಚಿತ್ರದಲ್ಲಿ ರಮ್ಯಾ ನಾಯಕಿ.

ಲಕ್ಕಿ ಚಿತ್ರವನ್ನು ಎಚ್ ಡಿ ಕುಮಾರಸ್ವಾಮಿ ಅರ್ಪಿಸುತ್ತಿದ್ದು ಶಾಮಿಕಾ ಎಂಟರ್‌ಪ್ರೈಸಸ್ ಲಾಂಛನದಲ್ಲಿ ನಿರ್ಮಿಸಲಾಗಿದೆ. ಲಕ್ಕಿ ಚಿತ್ರದ ಅಡಿಬರಹವೂ ವಿಶೇಷವಾಗಿದೆ. "ಏನ್ ಲಕ್ಕಿ ಮಗಾ" ಎಂಬುದು ಚಿತ್ರದ ಅಡಿಬರಹ. ಇದೆಲ್ಲಾ ಲಕ್ಕಿ ವಿಶೇಷಗಳಾಯಿತು.

ತಾನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಎಂದು ರಾಧಿಕಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕುಮಾರಸ್ವಾಮಿ ಅವರಾಗಲಿ ಅವರ ಮನೆಯವರಾಗಲಿ ಯಾರಿಂದಲೂ ಇದುವರೆಗೂ ಕಿರಿಕಿರಿಯೂ ಆಗಿಲ್ಲ ಎಂದಿದ್ದಾರೆ. ತಾಯಿಯಾಗಿ, ಮಡದಿಯಾಗಿ ಸುಖ ಸಂಸಾರದ ಭಾಗವಾಗಿದ್ದಾರೆ. ಆಕೆ ಆದಷ್ಟು ಬೇಗ ಸಿನಿಮಾರಂಗಕ್ಕೆ ಬರುವಂತಾಗಲಿ ಎಂಬುದೇ ಆಕೆಯ ಅಭಿಮಾನಿಗಳ ಆಸೆ. (ಒನ್‍ಇಂಡಿಯಾ ಕನ್ನಡ)

More from Filmibeat

English summary
Kannada actress Radhika Kumaraswamy celebrates his birthday today (Nov 11). At present Radhika is busy in her debut production movie Lucky.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X