ಬಗೆಹರಿಯಿತು ಕಿತ್ತಾಟ: ಪ್ರೇಮ್ ಗೆ 'ಪ್ರೇಮ್ ಅಡ್ಡ'
ಕೊನೆಗೂ, ಅಂದುಕೊಂಡಂತೆ ಅಲ್ಲದಿದ್ದರೂ ಬೇರೆಯದೇ ರೀತಿಯಲ್ಲಿ 'ಅಡ್ಡ' ಶೀರ್ಷಿಕೆ ವಿವಾದ ಬಗೆ ಹರಿದಿದೆ. ಪ್ರೇಮ್ ಗೂ ಅವರಿಷ್ಟದ 'ಅಡ್ಡ' ಸಿಕ್ಕಿದೆ. ಆದರೆ ಅದು 'ಪ್ರೇಮ್ ಅಡ್ಡ'. ಈ ಟೈಟಲ್ ವಿವಾದವನ್ನು ಕರ್ನಾಟಕ ಮಂಡಳಿ ಬಗೆಹರಿಸಿ ನಿರ್ದೆಶಕ ಪ್ರೇಮ್ ಗೆ 'ಪ್ರೇಮ್ ಅಡ್ಡ' ಶೀರ್ಷಿಕೆ ನೀಡಿ ಖುಷಿ ಪಡಿಸಿದೆ.
ಚಿತ್ರರಂಗಕ್ಕೆ ಅಡ್ಡಪರಿಣಾಮ ಆಗಲಿರುವುದು ಈ ಮೂಲಕ ತಪ್ಪಿದೆ. ಎಲ್ಲರಿಗೂ 'ಅಡ್ಡ' ಎಂಬ ಹೆಸರು ಕೇಳಿದ ತಕ್ಷಣ ನಿರ್ದೆಶಕ ಪ್ರೇಮ್ ಹಾಗೂ ನಿರ್ಮಾಪಕ ಬಿ.ಕೆ. ಶ್ರೀನಿವಾಸ್ ಮುಖ ಕಣ್ಣ ಮುಂದೆ ನಿಲ್ಲುತ್ತದೆ. ಇನ್ನುಮುಂದೆ ಪರಿಸ್ಥಿತಿ ಹಾಗಿಲ್ಲ, ಅಡ್ಡ ಶ್ರೀನಿವಾಸ್ ರದು. ಪ್ರೇಮ್ ಅಡ್ಡ ಪ್ರೇಮ್ ರದು.
ಫೋಟೋ ಶೂಟ್ ಮಾಡಿ ಶೂಟಿಂಗ್ ಗಾಗಿ ಕಾಯುತ್ತಿದ್ದ ಪ್ರೇಮ್ ಗೆ ಬಗೆಹರಿದ ಶೀರ್ಷಿಕೆ ವಿವಾದ ರಿಲೀಫ್ ನೀಡಿದೆ. ಟೈಟಲ್ ಅಧಿಕೃತವಾಗದೇ ಪೋಸ್ಟರ್ ಪ್ರಕಟಿಸುವಂತಿಲ್ಲ ಎಂಬ ಕಾರಣಕ್ಕೆ ಶೂಟಿಂಗ್ ನಡೆಸಿರಲಿಲ್ಲ. ಈಗ ಎಲ್ಲವೂ ಸರಾಗ. ಇಬ್ಬರೂ ಅವರವರ ಇಷ್ಟದ ಅಡ್ಡದಲ್ಲಿ ಸಿನಿಮಾ ಮಾಡಲಿದ್ದಾರೆ. ಪ್ರೇಕ್ಷಕರು ಯಾರ ಅಡ್ಡವನ್ನು ಪ್ರವೇಶಿಸುತ್ತಾರೆ ಎಂಬುದಷ್ಟೇ ಮುಂದಿರುವ ಪ್ರಶ್ನೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











