ಐಶ್ವರ್ಯಾ ರೈ ಹೆರಿಗೆಗೆ ಮುಂಚೆ ಅಭಿಷೇಕ್ ಪೇಚಾಟ

ಜಗತ್ತೇ ಕಾಯುತ್ತಿರುವ ಅಮಿತಾಬ್ ಬಚ್ಚನ್ ಸೊಸೆ ಐಶ್ವರ್ಯಾ ರೈ ಹೆರಿಗೆ ದಿನಾಂಕದ ಬಗ್ಗೆ ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಯಿಂದ ಅಧಿಕೃತವಾಗಿ ಯಾವ ಹೇಳಿಕೆಯೂ ಬಂದಿಲ್ಲ. ಆದರೆ ಆಸ್ಪತ್ರೆಯಿಂದ ಹೊರಗೆ, ಹೊರಗಿನಿಂದ ಒಳಗೆ 'ಐಶೂ' ಗಂಡ 'ಅಭಿಷೇಕ್ ಬಚ್ಚನ್' ಓಡಾಟ ಮಾತ್ರ ಮಿತಿಮೀರಿದೆಯಂತೆ.

ಅದ್ಯಾಕೆ ಕಾಲಿಗೆ ಗಾಲಿ ಕಟ್ಟಿಕೊಂಡಂತೆ ಅಭಿ ಓಡಾಡುತ್ತಾರೆ ಎಂದು ನೋಡಿದರೆ, ಹೆಂಡತಿ ಹೆರಿಗೆಯಾಗುವ ಮುಂಚೆ ಅವಳ ಬಯಕೆಗಳನ್ನು ತೀರಿಸಿಬೇಕಲ್ಲಾ. ಹೆರಿಗೆಯಾದ ಮೇಲೆ ಇಷ್ಟವಾದದ್ದನ್ನೆಲ್ಲಾ ತುಂಬಾ ದಿನ ತಿನ್ನೋ ಹಾಗೆ ಇಲ್ಲ. ಹಾಗಾಗಿ ಈಗಲೇ ತಂದು ತಿನ್ನಿಸುವ ಕಸರತ್ತು ನಡೆಸಿದ್ದಾರಂತೆ ಛೋಟಾ ಬಚ್ಚನ್.

ಅವರ ಓಡಾಟ ನೋಡಿ ಕೆಲವರಿಗೆ ಕೀಲುನೋವು, ಕಾಲುನೋವು ಶುರುವಾಗಿದೆ ಎಂಬುದು ಕುಹಕವಾಗಿರಬಹುದು. ಪಿಜ್ಜಾ, ದೋಕ್ಲಾ, ಇಮ್ಲಿ ಕಾ ಆಚಾರ್, ದಹಿ ವಡೆ, ಪಾವ್ ಭಾಜಿ, ಸಬ್ಜಿ ಪರೋಟಾಸ್ ಹೀಗೆ ಸಾಕಷ್ಟು ತಿಂಡಿತಿನಿಸುಗಳ ಐಶ್ ಹೊಟ್ಟೆ ಸೇರುತ್ತಿವೆಯಂತೆ. ವದಂತಿಯ ಪ್ರಕಾರ ಇಂದು (11.11.11) ಐಶೂ ಹೆರಿಗೆ ಆಗಬೇಕಿತ್ತು. ಸ್ಪೆಷಲ್ ಡೇ ಎಂಬುದು ಸಾಕಷ್ಟು ಜನರ ಭಾವನೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಸೆವೆನ್ ಹಿಲ್ಸ್ ಆಸ್ಪತ್ರೆಯ ಉಪಾಧ್ಯಕ್ಷ ಹಾಗೂ ಐಶ್ವರ್ಯಾ ರೈ ಸುದ್ದಿ ವಕ್ತಾರರು "ಅಷ್ಟೊಂದು ಗೌರವಾನ್ವಿತ ಕುಟುಂಬ ಬಚ್ಚನ್ ಪರಿವಾರ, ಮೂಢನಂಬಿಕೆಗೆ ಬೆಲೆಕೊಟ್ಟು ನೈಸರ್ಗಿಕ ಹೆರಿಗೆಯನ್ನು ತಡೆಯುವುದಿಲ್ಲ" ಎಂದಿದ್ದಾರೆ. ಅಲ್ಲಿಗೆ ಐಶ್ವರ್ಯಾ ರೈ ಹೆರಿಗೆ ಯಾವಾಗ ಎಂಬುದೀಗ ಎಲ್ಲರ ಪ್ರಶ್ನೆ! (ಒನ್ ಇಂಡಿಯಾ ಕನ್ನಡ)

More from Filmibeat

English summary
Pregnant Aishwarya Rai Bachchan is craving for pizzas, dhokla, imli ka achar and other spicy food before delivery at Seven Hills Hospital. Bachchans are fulfilling her desires.
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X