»   » ಬಾಕ್ಸಾಫೀಸ್ ಗಳಿಕೆಯಲ್ಲಿ ಅಕ್ಕತಂಗಿ ಮುಂದು

ಬಾಕ್ಸಾಫೀಸ್ ಗಳಿಕೆಯಲ್ಲಿ ಅಕ್ಕತಂಗಿ ಮುಂದು

Posted By:
Subscribe to Filmibeat Kannada

akka tangi tops box office ಮೊದಲ ದಿನ 11,914 ರೂಪಾಯಿ. ಎರಡನೇ ದಿನ 17,027 ರೂಪಾಯಿ. ಮೂರನೇ ದಿನ 43,337 ರೂಪಾಯಿ. ನಾಲ್ಕನೇ ದಿನ 49 ಸಾವಿರ ರೂಪಾಯಿ. ಇದು, ಬೆಂಗಳೂರಿನ ತ್ರಿಭುವನ್ ಚಿತ್ರಮಂದಿರದಲ್ಲಿ ನಡೆಯುತ್ತಿರುವ 'ಅಕ್ಕ ತಂಗಿ" ಗಳಿಕೆಯ ರಿಪೋರ್ಟ್.

ಮೊದಲ ದಿನ ಬೆಂಗಳೂರಿನ ಮುಖ್ಯ ಚಿತ್ರಮಂದಿರದಲ್ಲಿನ ಎಲ್ಲ ನಾಲ್ಕು ಆಟಗಳ ಗಳಿಕೆ ಹನ್ನೆರಡು ಸಾವಿರ ರೂಪಾಯಿ ದಾಟದಿದ್ದಾಗ ನಿರ್ಮಾಪಕ ರಮೇಶ್ ಯಾದವ್ ತಲೆಯ ಮೇಲೆ ಕೈಹೊತ್ತದ್ದು ನಿಜ. ಆದರೆ ಪ್ರದರ್ಶನದಿಂದ ಪ್ರದರ್ಶನಕ್ಕೆ ಗಳಿಕೆ ಸುಧಾರಿಸುತ್ತಿದ್ದಂತೆ ರಮೇಶ್‌ರ ಮೊಗದಲ್ಲಿ ನಗೆ ನಿಧಾನವಾಗಿ ಅರಳುತ್ತಿದೆ. ಅವರೀಗ, 'ಇದು ಹಂಡ್ರೆಡ್ ಡೇಸ್ ಫಿಲಂ ಸಾರ್" ಎನ್ನುತ್ತಿದ್ದಾರೆ.

ನಿರ್ಮಾಪಕರ ವಿಶ್ವಾಸದಂತೆ ಅಕ್ಕತಂಗಿ ನೂರು ದಿನ ಓಡುತ್ತದೋ ಮೂರು ವಾರಕ್ಕೆ ಎತ್ತಂಗಡಿ ಆಗುತ್ತದೋ ಬೇರೆಯ ಮಾತು. ಆದರೆ, ಸಿನಿಮಾ ಚೆನ್ನಾಗಿದೆ. ಪ್ರತಿಕೆಗಳ ಮುಕ್ತಕಂಠದ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕನೂ ಮೆಚ್ಚಿಕೊಂಡಿದ್ದಾನೆ. ಬಾಯಿ ಮಾತಿನ ಪ್ರಚಾರವೂ ಚಾಲ್ತಿಯಲ್ಲಿದೆ. ಈ ಮೌಥ್ ಪಬ್ಲಿಸಿಟಿಯಿಂದಾಗಿಯೇ ತ್ರಿಭುವನ್‌ನಲ್ಲಿ ಏರಿಕೆಯ ಗ್ರಾಫ್‌ನ ಚಿತ್ರಣ.

ಅಂದಹಾಗೆ, ಕಲೆಕ್ಷನ್ ಚಿಗುರುತ್ತಿರುವುದು ತ್ರಿಭುವನ್‌ನಲ್ಲಿ ಮಾತ್ರವಲ್ಲ. ಸಿನಿಮಾ ಬಿಡುಗಡೆಯಾಗಿರುವ ಎಲ್ಲ ಕೇಂದ್ರಗಳಲ್ಲೂ ಇದೇ ರೀತಿಯ ಆಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಯಂತೆ. ಒಳ್ಳೆಯ ಚಿತ್ರ ನಿಧಾನವಾಗಿಯೂ ಗೆಲ್ಲುವುದು ಉದ್ಯಮ ಹಿತದೃಷ್ಟಿಯಿಂದ ಒಳ್ಳೆಯದು.

(ದಟ್ಸ್ ಕನ್ನಡ ಚಿತ್ರವಾರ್ತೆ)
ಕಾಂಜಿ ಪಿಂಜಿ ಚಿತ್ರಗಳಲ್ಲಿ ಶ್ರುತಿ ನಟಿಸೊಲ್ಲವಂತೆ
ಚಿತ್ರವಿಮರ್ಶೆ:ಅಕ್ಕ ತಂಗಿಯರ ಈಬಂಧ

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X