ಪ್ರಿನ್ಸ್ ಮಹೇಶ್ ಜೋಡಿ ಅಕ್ಷರಾ ಗೌಡ ಸುದ್ದಿ ಬರೀ ಓಳು

ಅನಿಲ್ ಶಂಕರ್ ಪ್ರಕಾರ "ಮಹೇಶ್ ಬಾಬು ಮುಂದಿನ ಚಿತ್ರಕ್ಕೆ ಅಕ್ಷರಾ ಗೌಡ ನಾಯಕಿ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಂದ ನಂತರ ಸ್ವತಃ ಆಕೆಯೇ ನಮ್ಮನ್ನು ಸಂಪರ್ಕಿಸಿದಳು. ನನ್ನನ್ನು ಆ ಪಾತ್ರಕ್ಕಾಗಿ ಪರಿಗಣಿಸಿ ಎಂದು ಕೇಳಿಕೊಂಡಳು. ನಾವು ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸುಮ್ಮನಿರದ ಆಕೆ ಮತ್ತೆ ಮತ್ತೆ ಎಸ್ಎಂಎಸ್ ಕಳುಹಿಸಲಾರಂಭಿಸಿದಳು. ಆ ಚಿತ್ರಕ್ಕೆ ಆರಿಸದಿದ್ದರೂ ಪರವಾಗಿಲ್ಲ, ಬೇರೆ ಚಿತ್ರಕ್ಕಾದರೂ ಪರಿಗಣಿಸಿ ಎಂದು ಮನವಿ ಮಾಡಿದಳು" ಎಂದಿದ್ದಾರೆ.
ಬೆಂಗಳೂರಿನ ರೂಪದರ್ಶಿ ಅಕ್ಷರಾ ಗೌಡ ಮೊದಲು ಪ್ರಚಾರಕ್ಕೆ ಬಂದಿದ್ದು, ಕ್ರಿಕೆಟಿಗ ಯುವರಾಜ್ ಸಿಂಗ್ ಜತೆಗಿನ ಒಡನಾಟದ ಸುದ್ದಿಯಲ್ಲಿ. ನಂತರ ಬಾಲಿವುಡ್‌ನ "Chitkabrey" ಚಿತ್ರದಲ್ಲಿ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದ ಅಕ್ಷರಾ, ಸೊಂಟದ ಮೇಲೆ ಬಟ್ಟೆ ಧರಿಸಿಯೇ ಇರಲಿಲ್ಲ. ಅದರ ವಿಡಿಯೋವನ್ನು ಚಿತ್ರದ ನಿರ್ದೇಶಕರೇ ಬಹಿರಂಗಪಡಿಸಿದ್ದರು. ಆ ಮೂಲಕ ಸುದ್ದಿಯಾಗಿದ್ದರು. ಇದೀಗ ಮಹೇಶ್ ಬಾಬು ಬೆನ್ನಿಗೆ ಬಿದ್ದು ಗುದ್ದಿಸಿಕೊಂಡಿದ್ದಾರೆ. ಇನ್ನಾದರೂ ಬುದ್ಧಿ ಕಲಿತರೆ ಒಳ್ಳೆಯದು. (ಒನ್ ಇಂಡಿಯಾ ಕನ್ನಡ)


Click it and Unblock the Notifications











