ನೆನಪಿನಂಗಳದಲ್ಲಿ ಅಂಬಾರಿ ಸುಪ್ರೀತಾ
ಅಂಬಾರಿ ಚಿತ್ರದ ಭರ್ಜರಿ ಯಶಸ್ಸಿನ ನಂತರ ಪ್ರತಿಭಾವಂತ ನಟಿ ಸುಪ್ರೀತಾ ಅಂಬರದ ಎತ್ತರಕ್ಕೆ ಏರದೆ ಅವಕಾಶ ವಂಚಿತರಾದರೂ, ವಿಚಲಿತರಾಗದೆ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ನೀನೆಲ್ಲೋ ನಾನಲ್ಲೋ ಹಾಗೂ ಪುತ್ರ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯಕ್ಕೆ ಹೇಮಂತ್ ಎಂಬ ಹೊಸ ನಾಯಕ ನಟನ ಜೋಡಿಯಾಗಿ "ನೆನಪಿನಂಗಳ" ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಧನುಚಂದ್ರ ಮಾವಿನಕುಂಟೆ ಅವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನವಿರುವ "ನೆನಪಿಂಗಳ" ಚಿತ್ರವನ್ನು ಬಿ ರಾಮನಂಜಪ್ಪ ಹಾಗೂ ಜಿ ರಾಮಕೃಷ್ಣ ನಿರ್ಮಿಸಿದ್ದಾರೆ.
ಡಾ. ನಾಗೇಂದ್ರ ಪ್ರಸಾದ್ ತುಂಬಾ ಮುತುವರ್ಜಿ ವಹಿಸಿ ರಚಿಸಿರುವ ಗೀತೆಯ "ಪ್ರೀತಿಸುವ ಮನಸಿಗೆ ಕಣ್ಣ ಹನಿ ಸಹಜವೇ.." ಎಂಬ ಸಾಲುಗಳಿಗೆ ಹೇಮಂತ್ ಹಾಗೂ ಸುಪ್ರೀತಾ ಅವರು ದೊಡ್ಡ ಬಳ್ಳಾಪುರದ ಬಳಿ ಹೆಜ್ಜೆಹಾಕಿದ್ದಾರೆ. ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದು, ಎರಡನೇ ಹಂತದ ಸಿದ್ಧತೆಯಲ್ಲಿದೆ.
ಬಾಬ್ಬಿ ಸಿಆರ್ ಎಂಬ ಮಹಿಳಾ ಸಂಗೀತ ನಿರ್ದೇಶಕಿ ಈ ಚಿತ್ರದ ಮೂಲಕ ಹೊಸ ಬಗೆ ಸಂಗೀತದ ಕಿಚ್ಚನ್ನು ಹಚ್ಚಲು ತಯಾರಿಗಿದ್ದಾರೆ. ಲೈವ್ ರೆಕಾರ್ಡಿಂಗ್ ನಲ್ಲಿ ಸಾಕಷ್ಟು ಪರಿಣತಿ ಹೊಂದಿರುವ ಬಾಬ್ಬಿ ಸಂಗೀತದ ಬಗ್ಗೆ ನಾಗೇಂದ್ರ ಪ್ರಸಾದ್ ಮೆಚ್ಚುಗೆ ಸೂಚಿಸಿದ್ದಾರೆ. ಕರಿಬಸವಯ್ಯ, ನಿನಾಸಂ ಅಶ್ವಥ್, ಕುರಿಗಾಲು ಸುನಿಲ್, ಚಿತ್ರಾ ಶೆಣೈ, ತಾಜ್ ಮಹಲ್ ವಿಶ್ವ ಮುಂತಾದವರು ತಾರಾಗಣದಲ್ಲಿದ್ದಾರೆ.


Click it and Unblock the Notifications











