»   » 66ನೇ ಹುಟ್ಟುಹಬ್ಬದಂದು ಅಮಿತಾಭ್ ಆಸ್ಪತ್ರೆಗೆ ದಾಖಲು

66ನೇ ಹುಟ್ಟುಹಬ್ಬದಂದು ಅಮಿತಾಭ್ ಆಸ್ಪತ್ರೆಗೆ ದಾಖಲು

Subscribe to Filmibeat Kannada

ಮುಂಬೈ, ಅ. 11 : ತಮ್ಮ 66ನೆಯ ಹುಟ್ಟುಹಬ್ಬದಂದೆ ಹಿಂದಿ ಚಿತ್ರತಾರೆ ಅಮಿತಾಭ್ ಬಚ್ಚನ್ ಅವರು ಹೊಟ್ಟೆ ನೋವಿನ ಕಾರಣ ಇಲ್ಲಿಯ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸ್ನಾನ ಮುಗಿಸಿ ಪೂಜೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಚಿಕಿತ್ಸೆಗಾಗಿ ನಾನಾವತಿ ಆಸ್ಪತ್ರೆಗೆ ತರಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆತರಲಾಗಿದೆ.

ಅಮಿತಾಭ್ ಹೆಂಡತಿ ಜಯಾ ಬಚ್ಚನ್, ಮಗ ಅಭಿಷೇಕ್, ಸೊಸೆ ಐಶ್ವರ್ಯ ಮತ್ತು ಮಗಳು ಶ್ವೇತಾ ಅಮಿತಾಭ್ ಬಳಿಯಲ್ಲಿಯೇ ಇದ್ದಾರೆ. ಕೇವಲ ತಪಾಸಣೆಗಾಗಿ ಆಸ್ಪತ್ರೆಗೆ ತರಲಾಗಿದ್ದು ಆತಂಕಕ್ಕೆ ಕಾರಣವಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಮ್ಮ ಆರಾಧ್ಯದೈವದ ಹುಬ್ಬಹಬ್ಬದಂದು ಅಮಿತಾಭ್ ಅವರನ್ನು ಹಾರೈಸಲು ಸಹಸ್ರಾರು ಅಭಿಮಾನಿಗಳು ಅವರ ಮನೆಯ ಮುಂದೆ ನೆರೆದಿದ್ದರು. ಅವರು ಅಸ್ವಸ್ಥರಾಗಿದ್ದಾರೆಂದು ತಿಳಿದ ತಕ್ಷಣ ಅಭಿಮಾನಿಗಳಲ್ಲಿ ಆತಂಕದ ಛಾಯೆ ಮೂಡಿದೆ. ನಾನಾವತಿ ಆಸ್ಪತ್ರೆಯ ಬಳಿಯೂ ಅಭಿಮಾನಿಗಳು ನೆರೆದಿದ್ದಾರೆ.

1982ರಲ್ಲಿ ಕೂಲಿ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುವ ಸಂದರ್ಭದಲ್ಲಿ ನಟ ಪುನೀತ್ ಇಸ್ಸಾರ್ ಅವರಿಂದ ಆಕಸ್ಮಿಕವಾಗಿ ಅಮಿತಾಭ್ ಇರಿತಕ್ಕೆ ಒಳಗಾಗಿದ್ದರು. ಇದೇ ಮರುಕಳಿಸುತ್ತಿರುವ ಹೊಟ್ಟೆನೋವಿಗೆ ಮೂಲ ಕಾರಣ ಇರಬಹುದೆಂದು ತರ್ಕಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada