ಪುನೀತ್ ಅಣ್ಣಾ ಬಾಂಡ್ ಸಖತ್ ಸ್ಪೀಡ್ ಗುರೂ!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆ ಹಾಗೂ ದುನಿಯಾ ಸೂರಿ ನಿರ್ದೇಶನ ದ ಚಿತ್ರ "ಅಣ್ಣಾ ಬಾಂಡ್" ಶೂಟಿಂಗ್ ಅತ್ಯಂತ ರಭಸದಲ್ಲಿ ಸಾಗಿದೆ. ಬೆಂಗಳೂರು, ಮುತ್ತತ್ತಿ, ಕೆಜಿಎಫ್ ಸುತ್ತಮುತ್ತ ಭರದಿಂದ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ ಅಣ್ಣಾ ಬಾಂಡ್ ಚಿತ್ರವನ್ನು ಆದಷ್ಟು ಶೀಘ್ರದಲ್ಲಿ ತೆರೆಗೆ ತರಲು ತಯಾರಿ ನಡೆಸಿದಂತಿದೆ.

ಪುನೀತ್, ಪ್ರಿಯಾಮಣಿ, ನಿಧಿ ಸುಬ್ಬಯ್ಯ, ಜಾನ್ ಕುಕ್ಕಿನ್, ರಂಗಾಯಣ ರಘು, ಭಾಗವಹಿಸಿದ ಭಾಗದ ಚಿತ್ರೀಕರಣವನ್ನು ವೀಕ್ಷಿಸಲು ಜನಸಾಗರ ಸೇರುತ್ತಿದೆ. ಅಣ್ಣಾ ಬಾಂಡ್ ಗಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡಿರುವ ಪುನೀತ್ ಬಾಡಿ ನೋಡಲು ಜನ ಮುಗಿಬಿದ್ದಿದ್ದಾರೆ ಎಂಬ ಸುದ್ದಿ ಸೆಟ್ ನಿಂದ ಬಂದಿದೆ.

ದುನಿಯಾ ಸೂರಿ ನಿರ್ದೇಶನದ ಈ ಚಿತ್ರಕ್ಕೆ ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ ನೀಡಿದ್ದಾರೆ. ಹಾಗಾಗಿ ಹಾಡುಗಳ ಬಗ್ಗೆ ಜನರ ನಿರೀಕ್ಷೆ ಆಕಾಶದೆತ್ತರ ಮುಟ್ಟಿದೆ. ಯೋಗರಾಜ್ ಭಟ್ ಹಾಗೂ ಪುನೀತ್ ಸಂಗಮದ ಚಿತ್ರ 'ಪರಮಾತ್ಮ' ಜನರ ನಿರೀಕ್ಷೆ ತಲುಪುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಎಲ್ಲರ ಕಣ್ಣು "ಅಣ್ಣಾ ಬಾಂಡ್" ಸುತ್ತ ಸುತ್ತುತ್ತಿದೆ. (ಒನ್ ಇಂಡಯಾ ಕನ್ನಡ)

More from Filmibeat

English summary
Sandalwood most expected movie Annabond taking high speed shooting in and around Bangalore, Muthathi, KGF. Puneet Rajkumar and Duniya Soori combination is this Annabond.
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X