»   »  ರಜನಿ ಚಿತ್ರದ ನಾಯಕಿಯಾಗಿ ಆರತಿ ಛಾಬ್ರಿಯಾ

ರಜನಿ ಚಿತ್ರದ ನಾಯಕಿಯಾಗಿ ಆರತಿ ಛಾಬ್ರಿಯಾ

Posted By:
Subscribe to Filmibeat Kannada
ಸೂಪರ್ ಸ್ಟಾರ್ ಉಪೇಂದ್ರ ಅವರ ಹೊಸ ಚಿತ್ರ 'ರಜನಿ' ಚಿತ್ರದ ನಾಯಕಿಯಾಗಿ ಆರತಿ ಛಾಬ್ರಿಯಾ ಆಯ್ಕೆಯಾಗಿದ್ದಾರೆ. ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿರುವ ರಾಮು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮಾರ್ಚ್ 16 ರಿಂದ ಆರಂಭವಾಗಬೇಕಿತ್ತು. ಮಾರ್ಚ್ 27 ಕ್ಕೆ 'ಕನ್ನಡದ ಕಿರಣ್ ಬೇಡಿ' ಚಿತ್ರವನ್ನು ಬಿಡುಗಡೆ ಮಾಡಿದ ಬಳಿಕ ಏಪ್ರಿಲ್ 3 ರಿಂದ ರಜನಿ ಚಿತ್ರ ಸೆಟ್ಟೇರಲಿದೆ ಎಂದು ರಾಮು ತಿಳಿಸಿದ್ದಾರೆ.

ಥ್ರಿಲ್ಲರ್ ಮಂಜು ನಿರ್ದೇಶಿಸುತ್ತಿರುವ ರಜನಿ ಚಿತ್ರವನ್ನು 60 ದಿನಗಳ ಕಾಲ ಮೈಸೂರಿನಲ್ಲಿ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಿಸಲಿದ್ದಾರೆ. ಎರಡು ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸಲಿದ್ದಾರೆ. ಅಂದಹಾಗೆ 'ರಜನಿ' ತೆಲುಗಿನ 'ಕೃಷ್ಣ' ಚಿತ್ರದ ರೀಮೇಕ್.

ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶಿಸಿದ್ದ 'ಅಹಂ ಪ್ರೇಮಾಸ್ಮಿ' ಚಿತ್ರದ ಮೂಲಕ ಆರತಿ ಛಾಬ್ರಿಯಾ ಕನ್ನಡಕ್ಕೆ ಬಂದಿದ್ದರು. ರವಿಚಂದ್ರನ್ ಸಹೋದರ ಬಾಲಾಜಿ ಆ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ಮುರಳಿ ಮೋಹನ್ ನಿರ್ದೇಶನದ 'ಸಂತ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ನಟಿಸಿದ್ದರು. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಆರತಿ ಛಾಬ್ರಿಯಾ ನಟಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಉಪೇಂದ್ರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada