ಪ್ರೇಕ್ಷಕರ ಆಯ್ಕೆಯ 'ಆಟೋ ರಾಜ' ಅಜಯ್ ರಾವ್
ಆಟೋ ರಾಜ ಚಿತ್ರಕ್ಕೆ ನಾಯಕರಾಗಿ ಅಜಯ್ ರಾವ್ ಒಪ್ಪಿಕೊಂಡಿರುವ ವಿಷಯ ಖಚಿತವಾಗಿದೆ. ಕಳ್ಳ ಮಳ್ಳ ಸುಳ್ಳ' ಖ್ಯಾತಿಯ ಉದಯ್ ಪ್ರಕಾಶ್ ಚಿತ್ರ 'ಆಟೋ ರಾಜ', ಪಾತ್ರಕ್ಕೆ ಹೀರೋ ಹೆಸರನ್ನು ಸೂಚಿಸಲು ಕೋರಲಾಗಿತ್ತು. ಪ್ರೇಕ್ಷಕರು ಒಕ್ಕೊರಲಿನಿಂದ ಅಜಯ್ ರಾವ್ ರನ್ನು ಆಯ್ಕೆ ಮಾಡಿದ್ದಾರೆ. ಇದೀಗ ಅಜಯ್ ಕೂಡ ಒಪ್ಪಿದ್ದಾರೆ.
ಇಡೀ ಕನ್ನಡ ಚಿತ್ರರಂಗದಲ್ಲಿ ಆ ಪಾತ್ರವನ್ನು ಮತ್ತೆ ಮಾಡುವುದಿದ್ದರೆ, ಅದು ಅಜಯ್‌ರಿಂದ ಮಾತ್ರ ಅಂತ ತೀರ್ಪು ನೀಡಿದ್ದಾರೆ. ಇದರಿಂದ ಸಾಕಷ್ಟು ಖುಷಿ ಹೆಚ್ಚಿಸಿಕೊಂಡಿರುವ ಅಜಯ್ ತಮ್ಮ ಮೇಲಿರುವ ಜವಾಬ್ದಾರಿಯನ್ನೂ ಆರಿತಿದ್ದಾರೆ. "ಇದಕ್ಕೆ ಖಂಡಿತವಾಗಿಯೂ ನ್ಯಾಯ ಸಲ್ಲಿಸುವ ಭರವಸೆ ನನ್ನಲ್ಲಿದೆ" ಅಂತ ಅಜಯ್ ಹೇಳಿದ್ದಾರೆ.
"ಪ್ರೇಕ್ಷಕರಿಂದ ನಾನೇ ಆ ಪಾತ್ರಕ್ಕೆ ಆಯ್ಕೆಯಾಗಿದ್ದೇನೆ ಅಂತ ನಿರ್ದೇಶಕ ಉದಯ್ ಪ್ರಕಾಶ್ ಹೇಳಿದಾಗ ನನಗೆ ಆರಂಭದಲ್ಲಿ ನಂಬಲು ಸಾಧ್ಯವಾಗಲೇ ಇಲ್ಲ. ಆಟೋ ರಾಜ ಎಂದರೆ ಅದೇನು ಸಾಮಾನ್ಯ ಪಾತ್ರವಲ್ಲ. ಸುಲಭವಾಗಿ ಹೇಳಿ ಮುಗಿಸಬಹುದಾದ ಹೆಸರೂ ಅಲ್ಲ. ಸುದ್ದಿ ಕೇಳಿದಾಕ್ಷಣ ಖುಷಿಗಿಂತ ಹೆಚ್ಚಾಗಿ, ನರ್ವಸ್ ಆಗಿದ್ದೆ" ಎಂದಿದ್ದಾರೆ, ಅಜಯ್. ಮುಂದಿನ ಪುಟ ನೋಡಿ...


Click it and Unblock the Notifications











