For Quick Alerts
  ALLOW NOTIFICATIONS  
  For Daily Alerts

  ಸೆಲೀನಾರನ್ನು ಪ್ರಾಣಾಪಾಯದಿಂದ ರಕ್ಷಿಸಿದ ಸಾಕುನಾಯಿ

  By Rajendra
  |

  ಬಾಲಿವುಡ್ ತಾರೆ ಸೆಲೀನಾ ಜೇಟ್ಲಿ ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಕೆ ತಂಗಿದ್ದ ಕೊಠಡಿಯಲ್ಲಿ ದಿಗ್ಗನೆ ಬೆಂಕಿ ಕಾಣಿಸಿಕೊಂಡಿದೆ. ಆಗ ಸೆಲೀನಾ ಮಾತ್ರ ಸುಖ ನಿದ್ರೆಗೆ ಜಾರಿದ್ದರು. ಆಕೆ ಎಚ್ಚೆತ್ತುಕೊಳ್ಳುವುದು ಒಂಚೂರು ತಡವಾಗಿದ್ದರೂ ಮನೆಯೇ ಹೊತ್ತಿ ಉರಿಯಬೇಕಾಗಿತ್ತು. ಆದರೆ ಆಕೆಯ ಸಾಕುನಾಯಿ ಗೂಬ್ಲಿ (Gooblee) ಸೆಲೀನಾರನ್ನು ಪ್ರಾಣಾಪಾಯದಿಂದ ಬಚಾವ್ ಮಾಡಿದೆ.

  ಗೂಬ್ಲಿ ಬೊಗಳುವುದನ್ನು ಕೇಳಿ ಎಚ್ಚೆತ್ತುಕೊಂಡ ಸೆಲೀನಾ ಎದ್ದು ನೋಡಿದರೆ ಬೆಂಕಿ ಹೊತ್ತಿಕೊಂಡಿತ್ತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಕೊಠಡಿಯಲ್ಲಿದ್ದ ಟೆಲಿವಿಷನ್ ಸೆಟ್ ಹೊತ್ತಿ ಉರಿಯುತ್ತಿತ್ತು. ಕೊಠಡಿಯ ತುಂಬೆಲ್ಲಾ ದಟ್ಟ ಹೊಗೆ ಆವರಿಸಿತ್ತು. ಕೂಡಲೆ ಆಕೆ ಮೇನ್ ಸ್ವಿಚ್ ಆಫ್ ಮಾಡುವ ಮೂಲಕ ವಿದ್ಯುತ್ ಸಂಪರ್ಕವನ್ನು ಸೆಲೀನಾ ಕಡಿತಗೊಳಿಸಿದ್ದಾರೆ.

  ಆಕೆ ಮಲಗಿದ್ದ ಹಾಸಿಗೆಯಿಂದ ಕಣ್ಣಳತೆ ದೂರದಲ್ಲೇ ಟಿವಿ ಸೆಟ್ ಇಡಲಾಗಿತ್ತು. ಒಟ್ಟಿನಲ್ಲಿ ಈ ಆಘಾತದಿಂದ ಸೆಲೀನಾ ಇನ್ನೂ ಹೊರಬಂದಿಲ್ಲವಂತೆ. ಇತ್ತೀಚೆಗಷ್ಟೆ ಸೆಲೀನಾ ನಿಶ್ಚಿತಾರ್ಥ ದುಬೈ ಮೂಲದ ಹೋಟೆಲ್ ಉದ್ಯಮಿ ಪೀಟರ್ ಹಾಗ್ ಜತೆ ನಡೆದಿತ್ತು. ಕನ್ನಡದ 'ಶ್ರೀಮತಿ' ಚಿತ್ರದಲ್ಲಿ ಸೆಲೀನಾ ಅಭಿನಯಿಸಿದ್ದಾರೆ. [ಉಪೇಂದ್ರ]

  English summary
  Bollywood actress Celina Jaitley narrowly escaped from fire accident. At this time she was asleep. But with the continuous bark of her dog, Gooblee, she woke up. She was shocked to see that the television set in her room sparked and caught fire.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X