ರಾಮು ನಿರ್ಮಾಣದಲ್ಲಿ ರಾಧಿಕಾ, ಚಿರಂಜೀವಿ ಸರ್ಜಾ
ಈಗಾಗಲೆ ಭಾರಿ ಬಜೆಟ್‌ನ 'ಕಂಠೀರವ' ಬಿಡುಗಡೆ ಮಾಡಿ ರಿಲ್ಯಾಕ್ಸ್ ಆಗಿರುವ ರಾಮು ಈಗ ಮತ್ತೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಮುಖ್ಯಭೂಮಿಕೆಯಲ್ಲಿ ರಾಧಿಕಾ ಪಂಡಿತ್ ಮತ್ತು ಚಿರಂಜೀವಿ ಸರ್ಜಾ ಅಭಿನಯಿಸಲಿದ್ದಾರೆ. ಇದೇ ಫೆಬ್ರವರಿ 23ಕ್ಕೆ ಚಿತ್ರ ಸೆಟ್ಟೇರಲಿದೆ.
ಐಶ್ವ್ವರ್ಯ ನಾಗ್ ಚಿತ್ರದ ಮತ್ತೊಬ್ಬ ನಾಯಕಿ. ಇತ್ತೀಚೆಗೆ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಕಳ್ ಮಂಜ' ಚಿತ್ರದಲ್ಲಿನ ಐಶ್ವರ್ಯ ನಾಗ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಗುರು ಕಿರಣ್ ಸಂಗೀತ, ಕೃಷ್ಣ ಕುಮಾರ್ ಕ್ಯಾಮೆರಾ ಮತ್ತು ಸುಂದರ್ ರಾಜನ್ ಅವರ ಸಂಕಲನ ಚಿತ್ರಕ್ಕಿರುತ್ತದೆ.
ಬೆಂಗಳೂರಿನಲ್ಲಿ ಸೆಟ್ಟೇರಲಿರುವ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಎಂ ಡಿ ಶ್ರೀಧರ್. ಭಾರಿ ಬಜೆಟ್ ಚಿತ್ರಗಳನ್ನು ನಿರ್ಮಿಸಿರುವ ರಾಮು ಎಂಟರ್‌ಪ್ರೈಸಸ್ ಈಗ ಕಡಿಮೆ ಬಜೆಟ್‌ನ ಚಿತ್ರಗಳ ಕಡೆಗೆ ಗಮನ ಹರಿಸಿರುವುದು ಈ ಚಿತ್ರದ ಮೂಲಕ ಮನದಟ್ಟಾಗುತ್ತದೆ.
More from Filmibeat
English summary
Chiranjeevi Sarja and Radhika Pandit together in a film produced by Ramu Enterprises. The un titled movie will be directed by M.D. Sridhar. Guru Kiran will be composing music for this film. The film is lanuch on 23rd Feb. Aishwarya Nag is the another heroine of the movie.
ರಾಧಿಕಾ ಪಂಡಿತ್ ಚಿರಂಜೀವಿ ಸರ್ಜಾ ರಾಮು ಕಂಠೀರವ ಗುರು ಕಿರಣ್ ಶ್ರೀಧರ್ radhika pandit chiranjeevi sarja ramu kanteerava guru kiran sridhar


Click it and Unblock the Notifications











