twitter
    For Quick Alerts
    ALLOW NOTIFICATIONS  
    For Daily Alerts

    ಭೂಕಂಪ: ಮೆಜೆಸ್ಟಿಕ್ ನಲ್ಲಿ ಚಿತ್ರಪ್ರದರ್ಶನ ರದ್ದು

    |

    Movie Theater Image
    ಇಂಡೋನೇಷ್ಯಾ, ದಕ್ಷಿಣ ಭಾರತ ಸೇರಿದಂತೆ ಬೆಂಗಳೂರಿನಲ್ಲಿ ಭಾರೀ ಭೂಕಂಪ ಸಂಭವಿಸಿದ್ದು ಬಹಳಷ್ಟು ಜನರಿಗೆ ಇದರ ಅನುಭವ ಸ್ವತಃ ಆಗಿದೆ. ಈ ಸುದ್ದಿಯೀಗ ಕಾಳ್ಗಿಚ್ಚಿನಂತೆ ಎಲ್ಲೆಡೆ ಹರಡಿದ್ದು ಭಯಭೀತರಾದ ಜನ ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ಚಿತ್ರಮಂದಿರಗಳು ಪ್ರದರ್ಶನಗಳನ್ನು ರದ್ದು ಮಾಡಿದ್ದು ಚಿತ್ರಮಂದಿರಗಳು ಮುಚ್ಚಿವೆ.

    ಬೆಂಗಳೂರಿನಲ್ಲಿ ಭೂಕಂಪದ ಪರಿಣಾಮಕ್ಕೆ ಓಡಾಡುತ್ತಿದ್ದ ಮೆಟ್ರೋ ಸಂಚಾರ ಕೂಡ ನಿಂತಿದೆ. ಜನರು ಕಟ್ಟಡಗಳಿಂದ, ಅಪಾರ್ಟ್ ಮೆಂಟ್ ಗಳಿಂದ ಹೊರಗೋಡಿ ಬಂದಿದ್ದು ತಮ್ಮ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ವೀಕ್ಷಿಸುತ್ತಿದ್ದ ಜನರಿಗಂತೂ ಗರ ಬಡಿದಂತಾಗಿದೆ.

    ಬೆಂಗಳೂರಿನ ಮೆಜೆಸ್ಟಿಕ್ ಏರಿಯಾದಲ್ಲಿ ಚಿತ್ರ ಪ್ರದರ್ಶನ ಮಾಡುತ್ತಿದ್ದ ಚಿತ್ರಮಂದಿರಗಳು ತಕ್ಷಣ ಪ್ರದರ್ಶನ ರದ್ದು ಪಡಿಸಿವೆ. ಕಾರಣ ಭೂಕಂಪದ ಅನುಭವಗಳಾಗುತ್ತಿದ್ದಂತೆ ಪ್ರೇಕ್ಷಕರು ಚಿತ್ರಮಂದಿರಗಳಿಂದ ಓಡಿ ಹೊರಗೆ ಬಂದಿದ್ದಾರೆ. ಬಹಳಷ್ಟು ಭಯಭೀತರಾಗಿದ್ದ ಜನ ಚಿತ್ರನೋಡುವ ಬದಲು ಹೊರಗೆ ಓಡಿಬಂದು ತಮ್ಮ ತಮ್ಮ ಕುಟುಂಬಕ್ಕೆ ಆತ್ಮೀಯರಿಗೆ ಕರೆ ಮಾಡಿ ಮಾತನಾಡುತ್ತಿದ್ದುದು ಕಂಡು ಬಂದಿದೆ. ಚಿತ್ರಮಂದಿರಳು ಈಗ ಬಿಕೋ ಎನ್ನುತ್ತಿವೆ.

    ಮೆಜೆಸ್ಟಿಕ್ ಪ್ರದೇಶಗಳ ಹೊರತು ಬೇರೆ ಕಡೆ ಚಿತ್ರಮಂದಿರಗಳ ಸ್ಥಿತಿಗತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆಶ್ಚರ್ಯವೆಂದರೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಪ್ರದರ್ಶನ ರದ್ದು ಮಾಡಿರುವ ಸುದ್ದಿಯಿಲ್ಲ. ಒಟ್ಟಿನಲ್ಲಿ ಜನರಿಗೆ ಪ್ರಾಣಭೀತಿ ಕಾಡಿದ್ದು ಚಿತ್ರಮಂದಿರಗಳು ತೆರೆದೇ ಇದ್ದರೂ ಯಾರೂ ಒಳಹೋಗುವ ಸಾಹಸ ಸದ್ಯಕ್ಕೆ ಮಾಡಲಿಕ್ಕಿಲ್ಲ ಎನ್ನಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)

    English summary
    As Bangalore experienced Earthquake, the Movies Theaters in Bangalore Majestic area closed and stopped the Screening. 
 
    Wednesday, April 11, 2012, 16:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X