ಗೋಲ್ಡನ್ ಸ್ಟಾರ್ ಹಾಗೂ ಲಕ್ಕಿ ಸ್ಟಾರ್ ಬೊಂಬಾಟ್
ರಾಕ್ ಲೈನ್ ಪ್ರೊಡಕ್ಷನ್ ತಯಾರಿಸಿರುವ 30ನೇ ಚಿತ್ರ'ಬೊಂಬಾಟ್' ಅದ್ದೂರಿ ಚಿತ್ರೀಕರಣದ ನಂತರ ತೆರೆಗೆ ಬರಲು ಸಿದ್ದವಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಲಕ್ಕಿ ಸ್ಟಾರ್ ರಮ್ಯಾ ಅಭಿನಯದ ಈ ಚಿತ್ರವನ್ನು ಹಿರಿಯ ನಿರ್ದೇಶಕ ಡಿ.ರಾಜೇಂದ್ರಬಾಬು ನಿರ್ದೇಶಿಸಿದ್ದಾರೆ.ಈ ಚಿತ್ರದಲ್ಲಿ ಮತ್ತೆ ಗಣೇಶ್ ಹಾಗೂ ಮನೋಮೂರ್ತಿ ಅವರ ಜೋಡಿ ಮಧುರ ಸಂಗೀತದ ಮೋಡಿ ಮಾಡಲಿದೆ.
'ಈ ಚಿತ್ರದಿಂದ ನಾನು ಸಾಕಷ್ಟು ಕಲಿತಿದ್ದೀನಿ. ತುಂಬಾ ಬೆವರಿಳಿಸಿದ್ದೀನಿ. ಸೆಕೆಂಡ್ ಆಫ್ ಶೂಟಿಂಗ್ ವೇಳೆಗೆ ಸುಮಾರು 8 ಕೆ.ಜಿ ತೂಕ ಇಳಿಸಿದೆ. ರಾಜೇಂದ್ರಬಾಬು ಸಾರ್ ಅವರಿಂದ ನಟನೆ ವಿಷಯದಲ್ಲಿ ತುಂಬಾ ಕಲಿತೆ 'ಎನ್ನುತ್ತಾರೆ ಗಣೇಶ್
ರಾಕ್ ಲೈನ್ ಪ್ರೊಡಕ್ಷನ್ ಹಾಗೂ ಚಿತ್ರ ನಿರ್ದೇಶನದಲ್ಲಿ ಅರ್ಧ ಶತಕ ದಾಖಲಿಸಿರುವ ರಾಜೇಂದ್ರ ಬಾಬು ಅವರ ಜತೆ ಕೆಲಸಮಾಡಿದ್ದು, ಹಾಗೂ ರಮ್ಯ ಅವರ ಜತೆ ಅಭಿನಯ ಒಟ್ಟಾರೆ ಖುಷಿ ಕೊಟ್ಟಿದೆ. ಅದರಜತೆಗೆ ಮನೋಮೂರ್ತಿ ಅವರ ಸಂಗೀತದ 'ಹೇಳೇ.. ಸ್ಟ್ರಾಬರಿ ಕಣ್ಣಿನ ಹುಡುಗಿ....' ಹಾಗೂ 'ಮಾತಿನಲ್ಲಿ ಹೇಳಲಾರೆನು..' ಹಾಡುಗಳು ಜನಪ್ರಿಯ ಆಗುವುದರಲ್ಲಿ ಸಂಶಯವಿಲ್ಲ ಎಂದು ವಿಶ್ವಾಸದಿಂದ ಗಣೇಶ್ ನುಡಿದರು.
ಗಣೇಶ್ ಅವರ ಹುಟ್ಟುಹಬ್ಬದ ದಿನ(ಜುಲೈ 2)ದಂದು ಚಿತ್ರದ ಧ್ವನಿಸುರಳಿ ಬಿಡುಗಡೆ ಮಾಡಲಾಗುವುದು. ಆಗಸ್ಟ್ 8 ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆಕಾಣಲಿದೆ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದರು.
(ದಟ್ಸ್ ಕನ್ನಡ ಸಿನಿವಾರ್ತೆ)


Click it and Unblock the Notifications