»   » ಹಾರು ಹಕ್ಕಿಯನೇರಿದ ಪ್ರಸನ್ನ ಸುಸ್ತೊ ಸುಸ್ತು

ಹಾರು ಹಕ್ಕಿಯನೇರಿದ ಪ್ರಸನ್ನ ಸುಸ್ತೊ ಸುಸ್ತು

Subscribe to Filmibeat Kannada
A N Prasanna
ಕಥೆಗಾರ ಎ.ಎನ್.ಪ್ರಸನ್ನ ಮುಖದ್ಲಲಿ ದಣಿವು. ತಾವೇ ಬರೆದ್ದಿದ 'ಪಾರಿವಾಳಗಳು" ಕಥೆಯನ್ನಾಧರಿಸಿದ ಸಿನಿಮಾ ನಿರ್ದೇಶಿಸಿದ ಕಷ್ಟವನ್ನು ಅವರು ಮುಕ್ತವಾಗಿ ಹೇಳಿಕೊಂಡರು. ಅವರಿಗೆ ಕಾಟ ಕೊಟ್ಟ್ದಿದು 'ಅನಿಮಲ್ ವೆಲ್‌ಫೇರ್ ಬೋರ್ಡ್".

ಎಷ್ಟು ಪಾರಿವಾಳಗಳನ್ನು ಸಿನಿಮಾದ್ಲಲಿ ತೋರಿಸುವಿರಿ? ಅವುಗಳ್ಲಲಿ ಗಂಡೆಷ್ಟು, ಹೆಣ್ಣೆಷ್ಟು? ಅವುಗಳ ಮಾಲೀಕರಿಂದ ಮೊದಲು ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ತನ್ನಿ, ಶೂಟಿಂಗ್ ಮುಗಿದ ಮೇಲೆ ತಮ್ಮ ಪಕ್ಷಿಗಳಿಗೆ ಕಾಟ ಕೊಡಲಿಲ್ಲ ಅಂತ ಇನ್ನೊಂದು ಪತ್ರವನ್ನು ಇಸಿದುಕೊಂಡು ಬನ್ನಿ... ಹೀಗೆ ಉದ್ದುದ ಪಟ್ಟಿಯನ್ನು ಬೋರ್ಡ್ ಮುಂದಿಟ್ಟಾಗ ಪ್ರಸನ್ನ ಸಣ್ಣಗೆ ಬೆವರಿದ್ದು ಸಹಜ. ಆಮೇಲೆ ಅವನ್ನೆಲ್ಲಾ ಸರಿದೂಗಿಸ್ದಿದೂ ಆಯಿತು. ಬೋನಿನ್ಲಲಿ ಪಕ್ಷಿ ಇರುವ ದೃಶ್ಯ ಯಾಕೆ ತೆಗೆದ್ದಿದೀರಿ? ಅದನ್ನು ಕಿತ್ತುಹಾಕಿ ಅಂತ ಇನ್ನೊಂದು ಮಾತಿನೇಟನ್ನು ಬೋರ್ಡ್ ಕೊಟ್ಟಾಗಲಂತೂ ಪ್ರಸನ್ನ ಸುಸ್ತು!

ಇದರ ಪರಿಣಾಮ ಐದು ದೃಶ್ಯಗಳನ್ನು ಮತ್ತೆ ಚಿತ್ರೀಕರಿಸುವ ಉಸಾಬರಿಯನ್ನು ಅವರು ಎದುರಿಸಬೇಕಾಯಿತು. ಛಾಯಾಗ್ರಾಹಕ ರಾಮಚಂದ್ರ ಐತಾಳ್ ಕೂಡ ಈ ಎಲ್ಲಾ ಕಷ್ಟಗಳನ್ನು ಹತ್ತಿರದಿಂದ ಕಂಡು, ಪ್ರಸನ್ನ ಅವರ ದುಃಖ ಹಂಚಿಕೊಂಡ್ದಿದಾರೆ. 1960 ರಲ್ಲಿ ರೂಪಿಸಲಾದ ಅರ್ಥಹೀನ ನಿಯಮಾವಳಿಗಳನ್ನು ಇಟ್ಟುಕೊಂಡಿರುವ 'ಅನಿಮಲ್ ವೆಲ್‌ಫೇರ್ ಬೋರ್ಡ್", ದೃಶ್ಯವೊಂದರಲ್ಲಿ ಬೀದಿನಾಯಿ ಕಾಣಿಸಿಕೊಂಡರೂ ಅದರ ಮಾಲೀಕರಿಂದ ಪತ್ರ ತನ್ನಿ ಅಂತ ರಚ್ಚೆ ಹಿಡಿಯುತ್ತದಂತೆ. ಇಷ್ಟಕ್ಕೂ ಬೀದಿನಾಯಿಗೆ ಮಾಲೀಕರಾದರೂ ಯಾರು? ನಿಯಮ ಇಷ್ಟು ಪೊಳ್ಳಾದರೆ ಹೇಗೆ ಸ್ವಾಮಿ ಅನ್ನೋದು 'ಹಾರು ಹಕ್ಕಿಯನೇರಿ" ಸಿನಿಮಾ ಮಾಡಿರುವ ಪ್ರಸನ್ನ ಹಾಗೂ ಅವರ ತಂಡದ ಪ್ರಶ್ನೆ. ಅಂದಹಾಗೆ, ಈ ಚಿತ್ರಕ್ಕೆ ಪ್ರಸನ್ನ ನಿರ್ಮಾಪಕರೂ ಹೌದು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada