»   » ಹಂಸಿಕಾ: ಪರೀಕ್ಷೆಯ ಸಜೆಗಾಗಿ ನಟನೆಗೆ ರಜೆ

ಹಂಸಿಕಾ: ಪರೀಕ್ಷೆಯ ಸಜೆಗಾಗಿ ನಟನೆಗೆ ರಜೆ

Subscribe to Filmibeat Kannada

ವಿದ್ಯಾರ್ಥಿಗಳಿಗೆ ಈ ಸಮಯ ಆನಂದಮಯವಲ್ಲ.ಸಿನೆಮಾ, ಟಿವಿ, ಆಟಗಳಿಂದ ದೂರ ಸರಿಯುವ, ಪಠ್ಯಪುಸ್ತಕಗಳಿಗೆ ತೀರಾ ಹತ್ತಿರವಾಗುವ ಪರೀಕ್ಷಾ ಸಮಯ. ಇದರ ಪರಿಣಾಮ ಚಿತ್ರಮಂದಿರಗಳೂ ಬಿಕೋ ಎನ್ನುತ್ತಿವೆ. ಒಂದು ವಿಧದಲ್ಲಿ ಚಿತ್ರೋದ್ಯಮಕ್ಕೂ ಕಷ್ಟಕಾಲ! ಇದೇ ರೀತಿಯ ಕಷ್ಟ ಬಾಲಿವುಡ್ ನಟಿ ಹಂಸಿಕಾ ಮೋಟ್ವಾನಿಗೂ ಬಂದಿದೆ. ಕನ್ನಡದಲ್ಲಿ ಪುನೀತ್ ಜತೆ ಬಿಂದಾಸ್ ಚಿತ್ರದಲ್ಲಿ ಹಾಡಿ ಕುಣಿದ ಹಂಸಿಕಾ, ಸದ್ಯಕ್ಕೆ ಬಾಲಿವುಡ್ ಹಾಗೂ ದಕ್ಷಿಣ ಭಾರತದಲ್ಲಿ ಬಿಡುವಿಲ್ಲದಂತೆ ನಟಿಸುತ್ತಿರುವ ಈಕೆ ಸ್ವಲ್ಪ ಬಿಡುವು ಮಾಡಿಕೊಂಡು ಪರೀಕ್ಷೆ ಬರೆಯಲಿದ್ದಾರಂತೆ.

ಚಕ್ರಪಾಣಿ

ಚಿತ್ರೀಕರಣ ಮುಗಿಸಿಕೊಂಡು ದಕ್ಷಿಣ ಆಫ್ರಿಕಾದಿಂದ ಮರಳಿ ಬಂದಿರುವ ಹಂಸಿಕಾ ಒಂದು ತಿಂಗಳ ಕಾಲ ನಟನೆಗೆ ರಜೆ ಘೋಷಿಸಿದ್ದಾರೆ. ಮುಂಬೈನ ಕಾಲೇಜೊಂದರಲ್ಲಿ ಹನ್ನೆರಡನೇ ತರಗತಿ ಓದುತ್ತಿರುವ ಹಂಸಿಕಾ ಪರೀಕ್ಷೆ ಬರೆಯಲು ಸಿದ್ಧವಾಗುತ್ತಿದ್ದಾರೆ. ತನ್ನ ವೃತ್ತಿಜೀವನ ಹಾಗೂ ವಿದ್ಯಾರ್ಥಿ ಜೀವನವನ್ನು ಒಟ್ಟೋಟ್ಟಿಗೆ ಸರಿದೂಗಿಸಿಕೊಂಡು ಹೋಗುವ ಜಾಣತನವನ್ನೂ ಪ್ರದರ್ಶಿಸಿದ್ದಾರೆ. ಪರೀಕ್ಷೆಗಳಿಗೂ ಮುನ್ನ ಪ್ರತಿ ಎರಡು ತಿಂಗಳಿಗೊಮ್ಮೆ ತರಗತಿಗಳಿಗೂ ಹಾಜರಾಗುತ್ತಿದ್ದರಂತೆ. ಈಗ ಪರೀಕ್ಷೆಗಳು ಸಮೀಪಿಸಿರುವ ಕಾರಣ ರಾತ್ರಿಯಲ್ಲಾ ನಿದ್ದೆಗೆಟ್ಟು ಓದುತ್ತಿದ್ದಾರಂತೆ.

ಪ್ರಸ್ತುತ ತೆಲುಗಿನ ಜೂನಿಯರ್ ಎನ್‌ಟಿಆರ್ ಜೊತೆ 'ಕಂತ್ರಿ' ಹಾಗೂ ಬಾಲಿವುಡ್‌ ನಟ ಗೋವಿಂದ ಜೊತೆ 'ಮನಿ ಹೈ ತೋ ಹನಿ ಹೈ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕೆಲಸದಷ್ಟೇ ಪ್ರಾಮುಖ್ಯತೆಯನ್ನು ಓದಿಗೂ ಕೊಡುತ್ತಿದ್ದೇನೆ ಎನ್ನುತ್ತಾರೆ ಹಂಸಿಕಾ.ಈಗ ನನಗೆ ಪರೀಕ್ಷೆಗಳೇ ಮುಖ್ಯ ಎಂದು ಪುಸ್ತಕಗಳಲ್ಲಿ ತಲ್ಲೀನರಾಗಿದ್ದಾರೆ. ಪರೀಕ್ಷೆಯಲ್ಲಿ ಹಂಸಿಕಾ ಪಾಸಾಗಲಿ ಎಂಬುದೇ ನಮ್ಮ ಹಾರೈಕೆ. ಅಂದಹಾಗೆ ಆಕೆಯ ಅಕ್ಕಪಕ್ಕ ಕುಳಿತ ವಿದ್ಯಾರ್ಥಿಗಳು ಬೇರೆ ಕಡೆ ಗಮನ ಕೊಡದೆ ಎಚ್ಚರಿಕೆಯಿಂದ ಪರೀಕ್ಷೆ ಬರೆಯಬೇಕಾಗಿ ನಮ್ಮ ಆಪ್ತ ಸಲಹೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada