ಅರ್ಧ ಸೆಂಚುರಿ ಹೊಸ್ತಿಲಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ

By Rajendra

ಕನ್ನಡಿಗರ ಅಚ್ಚುಮೆಚ್ಚಿನ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ನೋಡಿದರೆ ಈ ಅನುಮಾನ ಕಾಡುವುದು ಸಹಜ. ಇನ್ನೂ ಎಂಗ್ ಅಂಡ್ ಎಜರ್ಜಿಟಿಕ್ ಆಗಿ ಕಾಣುವ ಶಿವಣ್ಣನನ್ನು ನೋಡಿದರೆ, ಶಿವಣ್ಣ ನಿಮ್ಮ ಡೇಟ್ ಆಫ್ ಬರ್ತ್ ರಾಂಗ್ ಅಲ್ಲ ತಾನೆ ಎಂದು ಕೇಳಬೇಕು ಅನ್ನಿಸುತ್ತದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಆಗಲೆ 49 ಎಂಬ ಎಂಬ ಅಚ್ಚರಿ, ಸಡಗರ, ಸಂಭ್ರಮ ಒಟ್ಟಿಗೆ ಆಗುತ್ತವೆ. ಆದರೆ ಅವರನ್ನು ನೋಡಿದವರು ಯಾರೂ ಶಿವಣ್ಣನ ವಯಸ್ಸನ್ನು ನಂಬೋದೆ ಇಲ್ಲ. ಎಲ್ಲೋ ಶಿವಣ್ಣನ ಡೇಟ್ ಆಫ್ ಬರ್ತ್‌ ರಾಂಗ್ ಇರಬೇಕು ಎಂದು ಅನುಮಾನಿಸುತ್ತಾರೆ!

ಈಗಲೂ ಹರಯದ ಯುವಕನ ಕಾಣುವ ಶಿವಣ್ಣ ಬಣ್ಣ ಹಚ್ಚಿದರೆ ಇಪ್ಪತ್ತರ ಆಜುಬಾಜಿನ ಯುವಕ. ಇದೇ ಮಂಗಳವಾರ (ಜು.12)ಶಿವಣ್ಣ ತಮ್ಮ ಬಾಳಿನ ಪಯಣದಲ್ಲಿ ಅರ್ಧ ಸೆಂಚುರಿಗೆ ಇನ್ನೊಂದು ಅಡಿ ದೂರದಲ್ಲಿದ್ದಾರೆ. ನಲವತ್ತೊಂಬತ್ತನೆ ವಸಂತಕ್ಕೆ ಅಡಿಯಿಡುತ್ತಿರುವ ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು.

ಎಷ್ಟೋ ಜನ ತಂಗಿಯರು ಶಿವಣ್ಣನಲ್ಲಿ ಅಣ್ಣನನ್ನು ಕಂಡಿದ್ದರೆ, ಇನ್ನೆಷ್ಟೋ ಜನ ಬದುಕಿನಲ್ಲಿ ಹೊಸ ಹೊಸ ಆದರ್ಶಗಳನ್ನು ತುಂಬಿಕೊಂಡಿದ್ದಾರೆ. ಎಷ್ಟೋ ಮಂದಿ ಅಭಿಮಾನಿಗಳು ಎಲ್ಲೋ ಕಳೆದುಕೊಂಡ ಪ್ರೀತಿ,ಪ್ರೇಮ ಅನುರಾಗ ಅನುಕಂಪಗಳನ್ನು ಶಿವಣ್ಣನ ಮೂಲಕ ಗಳಿಸಿಕೊಂಡಿದ್ದಾರೆ. ಶಿವಣ್ಣ ಅತ್ತ ವೃತ್ತಿ ಜೀವನ, ಇತ್ತ ದಾಂಪತ್ಯ ಜೀವನದಲ್ಲಿ ಕಾಲು ಶತಕ ಪೂರೈಸಿದರೆ ಬಾಳಿನ ಪಯಣದಲ್ಲಿ ಅರ್ಧ ಸೆಂಚುರಿಗೆ ಹತ್ತಿರವಾಗಿದ್ದಾರೆ.

ಇತ್ತೀಚೆಗೆ ಅವರು ತಲೆಗೆ ಪೆಟ್ಟು ಮಾಡಿಕೊಂಡು ಅದು ಕೊಂಚ ಸೀರಿಯಸ್ಸಾಗಿ ಚಿಕಿತ್ಸೆ ಪಡೆಯಲು ಪ್ಯಾರಿಸ್‌ಗೆ ಹೋಗಿದ್ದರು.ಹೊಸ ಉತ್ಸಾಹದೊಂದಿಗೆ ಶಿವಣ್ಣ ಈಗ ಬೆಂಗಳೂರಿಗೆ ಹಿಂತಿರುಗಿದ್ದಾರೆ. ಹೆಬ್ಬಾಳ ಬಳಿಕ ಶಿವಣ್ಣನ ನಾಗಾವರ ಮನೆಯಲ್ಲಿ ಇಂದು ರಾತ್ರಿ ಅಭಿಮಾನಿಗಳ ಸಾಗರ ಜೊತೆಗೆ ಸಂಭ್ರಮ,ಸಡಗರ.

ಮಂಗಳವಾರ ಬೆಳಗ್ಗೆ ದೇವರ ದರ್ಶನ ಪಡೆದು ಡಾ.ರಾಜ್ ಸಮಾಧಿಗೆ ನಮಿಸಿ ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಲಕ್ಷ್ಮಿ, ಶಿವ ಚಿತ್ರಗಳಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ. ಶಿವಣ್ಣನ ಮಹತ್ವಾಕಾಂಕ್ಷಿ ಚಿತ್ರ 'ಜೋಗಯ್ಯ' ಆಗಸ್ಟ್ 12ರಂದು ರಾಜ್ಯದಾದ್ಯಂತ 200 ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗುತ್ತಿದೆ. ಶಿವಣ್ಣನಿಗೆ ಹುಟ್ಟುಹಬ್ಬದ ಹೂಗುಚ್ಛ ಕಳಿಸಿ ಶುಭಾಶಯ ಕೋರಿ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Hat Trick Hero Shivarajkumar celebrating his birthday on July 12. We wishes a very happy and prosperous birthday for the most lovable personality Shivarajakumar a day in advance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X