Just In
Don't Miss!
- News
ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬೈಡನ್ ನೀಡಲಿರುವ ಆದೇಶಗಳಿವು
- Sports
ರಾಜಸ್ಥಾನ ತಂಡದಿಂದ ಸ್ಟೀವ್ ಸ್ಮಿತ್ ಔಟ್, ಸಂಜು ಹೊಸ ಕ್ಯಾಪ್ಟನ್!
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Automobiles
ಭಾರೀ ಗಾತ್ರದ ಎಸ್ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Finance
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಗೂ ಮುನ್ನವೇ ಪುನೀತ್ 'ಹುಡುಗರು'ಗೆ ಭರ್ಜರಿ ಬೆಲೆ
ಜಾಕಿ ಬಳಿಕ ಬಿಡುಗಡೆಗೆ ಸಿದ್ಧವಾಗುತ್ತಿರುವ ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಹುಡುಗರು. ಈ ಚಿತ್ರ ತಮಿಳಿನ ನಾಡೋಡಿಗಳ್ ರೀಮೇಕ್ ಆದರೂ ಕನ್ನಡ ಚಿತ್ರೋದ್ಯಮದಲ್ಲಿ ಅಪಾರ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್ ನಿರ್ಮಿಸುತ್ತಿರುವ ಚಿತ್ರ ಎಂಬುದು ಚಿತ್ರದ ಬಗೆಗಿನ ಕುತೂಹಲಕ್ಕೆ ಮತ್ತೊಂದು ಕಾರಣ.
ಗಾಂಧಿನಗರದ ಮೂಲಗಳ ಪ್ರಕಾರ, ಕೆಲವು ಪ್ರದೇಶಗಳ ಚಿತ್ರದ ವಿತರಣೆ ಹಕ್ಕುಗಳು ಜಾಕಿ ಚಿತ್ರಕ್ಕಿಂತಲೂ ಅತ್ಯಧಿಕ ಬೆಲೆಗೆ ಮಾರಾಟವಾಗಿವೆಯಂತೆ. ತಮಿಳು ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ 'ನಾಡೋಡಿಗಳ್' ಚಿತ್ರ ಕನ್ನಡದಲ್ಲೂ ದಾಖಲೆ ನಿರ್ಮಿಸುವ ಎಲ್ಲ ಸಾಧ್ಯತೆಗಳು ಇವೆ ಎಂಬ ಮಾತುಗಳು ಕೇಳಿಬಂದಿವೆ.
ಸದ್ಯಕ್ಕೆ ಇಂದಿನಿಂದ (ಏ.11) ಹುಡುಗರು ಚಿತ್ರೀಕರಣ ಬಾಕಿ ಇರುವ ಒಂದೇ ಒಂದು ಡ್ಯುಯೆಟ್ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ನಾಲ್ಕು ದಿನಗಳ ಚಿತ್ರೀಕರಣಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಪಾಲ್ಗೊಳ್ಳಲಿದ್ದಾರೆ. ಮಾದೇಶ್ ಅವರ ಆಕ್ಷನ್, ಕಟ್‌ನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಮೇ.19 ಅಥವಾ 20ಕ್ಕೆ ಚಿತ್ರವನ್ನು ತೆರೆಗೆ ತರಲು ಸಿದ್ಧತೆಗಳು ನಡೆಯುತ್ತಿವೆ.
ತಾರಾಗಣದಲ್ಲಿ ಪುನೀತ್ ರಾಜ್‌ಕುಮಾರ್, ರಾಧಿಕಾ ಪಂಡಿತ್, ಯೋಗೀಶ್, ಶ್ರೀನಗರ ಕಿಟ್ಟಿ, ವಿಶಾಲಹೆಗ್ಡೆ, ಅಭಿನಯಾ (ನಾಡೋಡಿಗಳ್ ಖ್ಯಾತಿ) ರಮ್ಯಾ ಬಾರ್ನೆ, ಶಾಂತಮ್ಮ, ರಂಗಾಯಣ ರಘು, ಸುಧಾ ಬೆಳವಾಡಿ, ಶ್ರೀಕಾಂತ್ ಹೊನ್ನಾವಳ್ಳಿ, ಶ್ರೀನಿವಾಸಪ್ರಭು, ವನಿತಾವಾಸು, ಆಶಾರಾಣಿ, ಕೃಷ್ಣ ಅಡಿಗಾ, ಮುಂತಾದವರಿದ್ದಾರೆ.