ಇಂದ್ರಜಿತ್ 'ದೇವ'ರಾಗಿ ಸದ್ಯದಲ್ಲೇ ದಿಗಂತ್ ಪ್ರತ್ಯಕ್ಷ!

ಗುಳಿಕೆನ್ನೆಯ ದಿಗಂತ್ ನಾಯಕಿಯ ಆಯ್ಕೆ ಇನ್ನೂ ಆಗಿಲ್ಲವಂತೆ. ಆದರೆ ಸ್ಟಾರ್ ನಟಿಯನ್ನೇ ಕರೆತರುವ ಪ್ರಯತ್ನದಲ್ಲಿ ಇಂದ್ರಜಿತ್ ಇದ್ದಾರೆ. ಈ ಸಿನಿಮಾಕ್ಕೆ ಪಕ್ಕಾ ಯೂಥ್ ಸಬ್ಜೆಕ್ಟನ್ನೇ ಆಯ್ಕೆಮಾಡಿಕೊಂಡಿದ್ದಾರಂತೆ. ಒಂದಷ್ಟು ಹೊಸತನವಿರುವ ಕಥೆ, ಎಲ್ಲಾ ಪಾತ್ರಗಳು ಇಂದಿನ ಕಾಲಘಟ್ಟ, ವಯೋಮಾನಕ್ಕೆ ತಕ್ಕಂತೆ ಇರುತ್ತವೆ ಎಂದು ಹೇಳಲು ಮರೆಯಲಿಲ್ಲ ಇಂದ್ರಜಿತ್.
ಮುಂದಿನ ತಿಂಗಳು ಮುಹೂರ್ತಕ್ಕೆ ರೆಡಿಯಾಗಿರುವ ಈ ಚಿತ್ರದ ನಿರ್ಮಾಣದ ಜವಾಬ್ಧಾರಿಯನ್ನೂ ಕೂಡ ಇಂದ್ರಜಿತ್ ಹೊತ್ತಿರುವುದು ಇನ್ನೊಂದು ವಿಶೇಷ. ಚಿತ್ರಕ್ಕೆ ಜೆಸ್ಸಿಗಿಫ್ಟ್ ಸಂಗೀತ ಹಾಗೂ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಯಾವ ಸ್ಟಾರ್ ನಟಿ ದಿಗಂತ್ ಜೊತೆಯಾಗಲಿದ್ದಾರೆ ಮತ್ತು ಯಾವಾಗ ತೆರೆಯಮೇಲೆ ಜನರು ಇಂದ್ರಜಿತ್ ಕಮಾಲ್ ನೋಡಬಹುದು ಎಂಬುದಷ್ಟೇ ಸದ್ಯದ ಕುತೂಹಲ!
More from Filmibeat
English summary
Director Indrajith Lankesh is going to Direct new Movie Dev. Diganth is the Hero. The Director is trying for Star Heroine for this. Story Consists Youth Subject.


Click it and Unblock the Notifications











