ಕೊಬ್ರಿ ಮಂಜು ಕೈಗೆ ತೆಂಗಿನ ಚಿಪ್ಪು ಕೊಟ್ಟ ರವಿಮಾಮ!

'ಕಳ್ಳ ಮಳ್ಳ ಸುಳ್ಳ; ಪ್ರಚಾರಕ್ಕೆ ರವಿ ಬಂದಿದ್ದಿದ್ದರೆ ಚಿತ್ರ ಇನ್ನೂ ಚೆನ್ನಾಗಿ ಓಡುತ್ತಿತ್ತು. ಆದರೆ ಅವರು ಪ್ರಚಾರಕ್ಕೆಬರಲಿಲ್ಲ. ರವಿ ಬಗ್ಗೆ ತಮಗೆ ತುಂಬ ಬೇಸರವಾಗುತ್ತಿದೆ ಎಂದು ಕೊಬ್ರಿ ಮಂಜು ವಿಷಾದ ವ್ಯಕ್ತಪಡಿಸಿದ್ದಾರೆ. ಸ್ವತಃ ನಿರ್ಮಾಪಕ, ಕಲಾವಿದ ಹಾಗೂ ತಂತ್ರಜ್ಞರೂ ಆಗಿರುವ ರವಿಗೆ ಪ್ರಚಾರಕ್ಕೆ ಬರಲಿಲ್ಲ ಎಂದರೆ ಎಷ್ಟೆಲ್ಲಾ ನಷ್ಟವಾಗುತ್ತದೆ ಎಂಬುದು ಅವರಿಗೆ ನಾನು ತಿಳಿಸಿ ಹೇಳಬೇಕಾಗಿಲ್ಲ ಎಂದಿದ್ದಾರೆ.
ರವಿ ಬಂದು ಚಿತ್ರದ ಬಗ್ಗೆ ಒಂದೆರಡು ಒಳ್ಳೆಯ ಮಾತನಾಡಿದ್ದರೆ ನಮ್ಮ ಚಿತ್ರಕ್ಕೆ ಇನ್ನಷ್ಟು ಬಲಬರುತ್ತಿತ್ತು. 'ಕಳ್ಳ ಮಳ್ಳ ಸುಳ್ಳ' ಚಿತ್ರ ತಮ್ಮನ್ನು ನಷ್ಟದಿಂದ ಪಾರು ಮಾಡಿದೆ. ಈ ಚಿತ್ರದ ಎಲ್ಲಾ ಕಲಾವಿದರನ್ನು ಬೆಂಗಳೂರಿನಿಂದ ಮೈಸೂರುತನಕ ಕರೆದೊಯ್ಯಬೇಕು ಎಂದು ಪ್ಲಾನ್ ಹಾಕಿದ್ದೆ. ಆದರೆ ರವಿಚಂದ್ರನ್ ಪ್ರೆಸ್‌ಮೀಟ್‌ಗೆ ಬರದೆ ತೀವ್ರ ನಿರಾಶೆ ಮಾಡಿದ್ದಾರೆ. ಇಂತಹ ಕಲಾವಿದರನ್ನು ನಂಬಿಕೊಂಡರೆ ನಮಗೆ ಚಿಪ್ಪೇ ಗತಿ ಎಂಬಂತೆ ಕೊಬ್ರಿ ಮಂಜು ಮುಖಮಾಡಿಕೊಂಡಿರುವುದು ಗ್ರೀನ್‌ಹೌಸ್ ರೆಸ್ಟೋರೆಂಟ್‌ನ ಮಂದಬೆಳಕಿನಲ್ಲಿ ಪ್ರಖರವಾಗಿ ಕಾಣಿಸುತ್ತಿತ್ತು. (ಒನ್‌ಇಂಡಿಯಾ ಕನ್ನಡ)


Click it and Unblock the Notifications











