ಶಂಕರ್ ಹೋಲುವ ದೀಪಕ್ ಅವತಾರಕ್ಕೆ ಬಹು ಪರಾಕ್

ಸ್ಟೈಲ್, ಲುಕ್ ನಲ್ಲಿ ಪಳಗಿರುವ ದೀಪಕ್ ಈ ಚಿತ್ರದ ಮೂಲಕ ನಟನೆಯಲ್ಲೂ ತಾನು ಪ್ರತಿಭಾವಂತ ಎಂದು ತೋರಿಸಲು ಸಜ್ಜಾಗಿದ್ದಾನೆ. ಹಳೆ ರೌಡಿಸಂ ಇಮೇಜ್ ಅನ್ನು ತೊಡದು ಹಾಕಿ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುವುದಾಗಿ ದೀಪಕ್ ಹೇಳಿದ್ದಾರೆ.
ಇದು ನಿಜವಾದ ಅವತಾರ: ದೀನ ಸ್ಥಿತಿಯಲ್ಲಿರುವ ಚಿತ್ರರಂಗದ ಹಿರಿಯ ಕಲಾವಿದರು ತಂತ್ರಜ್ಞರಿಗೆ ನೆರವಾಗಲು ದೀಪಕ್ ನೇತೃತ್ವದಲ್ಲಿ ಅವತಾರ ಚಿತ್ರ ತಂಡ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಹಿರಿಯ ಸಂಗೀತ ನಿರ್ದೇಶಕ ರತ್ನಂ ಅವರಿಗೆ 25 ಸಾವಿರ ರೂಗಳ ಸಹಾಯ ಧನ ನೀಡಿದ್ದಾರೆ. ಮುಂದೆ ಸದಾಶಿವ ಸಾಲಿಯಾನ್, ಶನಿ ಮಹಾದೇವಪ್ಪ, ರೇಣುಕಾ ಪ್ರಸಾದ್ ಮುಂತಾದ ಕಲಾವಿದರಿಗೆ ನೆರವಾಗುವ ಯೋಜನೆ ಇದೆಯಂತೆ.
ಅವತಾರ ಚಿತ್ರ: ತಾಯಿ ಎದುರಲ್ಲೆ ಇದ್ದರೂ ನಾಯಕನಿಗೆ ನಾನೇ ನಿನ್ನ ಮಗ ಎಂದು ಹೇಳಿಕೊಳ್ಳಲಾಗದಂಥ ಪರಿಸ್ಥಿತಿ. ಮಲಯಾಳಂನಲ್ಲಿ ಹತ್ತು ಹನ್ನೆರಡು ಚಿತ್ರಗಳನ್ನು ನಿರ್ದೇಶಿಸಿರುವ ವಿಜೀಶ್, ಕನ್ನಡದಲ್ಲಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಂಜಯ್ ಚೌಧುರಿ ಸಂಗೀತ ಈ ಚಿತ್ರದ ಹೈಲೇಟ್ ಆಗಲಿದೆ. ಸಂಜಯ್ ಚೌಧುರಿ ಅಂದರೆ, ಹಿಂದಿ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಸಲೀಲ್ ಚೌಧುರಿ ಅವರ ಪುತ್ರ. ವಿಎಸ್ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಬಿಎ ಮಧು ಸಂಭಾಷಣೆ ಬರೆದಿದ್ದಾರೆ. ದೀಪಕ್ ಅವರ ಈ ಹೊಸ ಅವತಾರ ಕನ್ನಡ ಸಿನಿಭಕ್ತರಿಗೆ ಪ್ರಿಯವಾಗುವುದೇ ಕಾದು ನೋಡಬೇಕು.


Click it and Unblock the Notifications