For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ನಲ್ಲಿ ಕನ್ನಡದ ಪರಿ ಚಿತ್ರದ ಪ್ರೀಮಿಯರ್

  By Rajendra
  |

  ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಕನ್ನಡ ಚಿತ್ರವೊಂದು ಪ್ರೀಮಿಯರ್ ಪ್ರದರ್ಶನ ಏರ್ಪಡಿಸಲಾಗಿದೆ. ಇದನ್ನು ಕನ್ನಡ ಚಿತ್ರರಂಗದಲ್ಲೊಂದು ಮೈಲುಗಲ್ಲು ಎನ್ನಬಹುದು. ಸುಧೀರ್ ಅತ್ತಾವರ್ ಅವರ 'ಪರಿ' (ಅಡಿಬರಹ: ನಿನ್ನ ಪ್ರೇಮದ ಪರಿಯ ನಾನರಿಯೆ) ಮುಂಬೈನಲ್ಲಿ ಏ.15ರಂದು ಪ್ರದರ್ಶನ ಕಾಣುತ್ತಿದೆ.

  ಮುಂಬೈನ ಅಂಧೇರಿಯ ಸಿನಿಮ್ಯಾಕ್ಸ್ ಚಿತ್ರಮಂದಿರದಲ್ಲಿ ಏ.15ರಂದು ಸಂಜೆ 7 ಗಂಟೆಗೆ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಮುಂಬೈ ಕನ್ನಡಿಗರಿಗೆ , ಬಾಲಿವುಡ್ ಸ್ಟಾರ್‌ಗಳನ್ನು ಚಿತ್ರ ಪ್ರದರ್ಶನಕ್ಕೆ ಆಹ್ವಾನಿಸಿರುವುದು ವಿಶೇಷ.

  ಕನ್ನಡ ಚಿತ್ರವೊಂದು ಬೇರೆ ರಾಜ್ಯದಲ್ಲಿ ಪ್ರದರ್ಶವಾಗಬೇಕು ಅವರೂ ಕನ್ನಡ ನಾಡು, ನೆಲದ ಬಗ್ಗೆ ಅರಿಯಬೇಕೆಂಬ ಧ್ಯೇಯೋದ್ದೇಶ 'ಪರಿ' ಚಿತ್ರತಂಡದ್ದು. ಮೇ 4ರಂದು ಪರಿ ಚಿತ್ರವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ. (ಒನ್‌ಇಂಡಿಯಾ ಕನ್ನಡ)

  English summary
  Kannada film Pari premier show organised at cinemax theater, Andheri, Mumbai on 15th April. The movie is based on ‘Bharadwaja’ novel written by Sampanna Muthalik

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X