ಸೆನ್ಸಾರ್‌ನಲ್ಲಿ ಜೋಗಯ್ಯ ಪಾಸು; ಆಗಸ್ಟ್ 19ಕ್ಕೆ ತೆರೆಗೆ

By Rajendra

ಅಂತೂ ಇಂತೂ 2011ರ ಬಹುನಿರೀಕ್ಷಿತ 'ಜೋಗಯ್ಯ' ಚಿತ್ರ ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ. ಆಗಸ್ಟ್ 19ಕ್ಕೆ ಚಿತ್ರ ಬಿಡುಗಡೆಗೊಳ್ಳಲಿದೆ. ಈ ಮಧ್ಯೆ ಭಾನುವಾರ (ಆ .7) ಸೆನ್ಸಾರ್ ವೀಕ್ಷಣೆಗೆ ಹೋಗಿದ್ದ ಚಿತ್ರಕ್ಕೆU/A ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರದ ಮೂರು ದೃಶ್ಯಗಳಿಗೆ ಕತ್ತರಿ ಹಾಕಿ ಬಿಡುಗಡೆಗೆ ಅನುಮತಿ ನೀಡಿದೆ ಸೆನ್ಸಾರ್ ಮಂಡಳಿ.

ಚಿತ್ರ ಬಿಡುಗಡೆಯ ದಿನಾಂಕವನ್ನು ನಿರ್ಮಾಪಕಿ ರಕ್ಷಿತಾ ಪ್ರೇಮ್ ಕೂಡಾ ಫೇಸ್ ಬುಕ್ ನಲ್ಲಿ ಸ್ಪಷ್ಟ ಪಡಿಸಿದ್ದಾರೆ. ಸೆನ್ಸಾರ್ ತಂಡಕ್ಕೆ ಚಿತ್ರ ವೀಕ್ಷಿಸಲು ರೇಣುಕಾಂಬ ಚಿತ್ರಮಂದಿರವನ್ನು ಮಂಗಳವಾರಕ್ಕೆ (ಆ .9) ನಿಗದಿ ಪಡಿಸಲಾಗಿತ್ತು. ಆದರೆ ಚಿತ್ರದ ಫಸ್ಟ್ ಪ್ರಿಂಟ್ ತಡವಾಗಿ ಬಂದ ಕಾರಣ ಬುಧವಾರ (ಆ .10) ಮಂಡಳಿ ಸದಸ್ಯರು ಚಿತ್ರ ವೀಕ್ಷಿಸಿ ಪ್ರಮಾಣಪತ್ರ ನೀಡಿದ್ದಾರೆ.

ಈ ಮಧ್ಯೆ ಕಪಾಲಿ ಚಿತ್ರಮಂದಿರದಲ್ಲಿ ಶಿವಣ್ಣ ಅವರ ಭಾರೀ ಕಟ್ ಔಟ್ ನಿಲ್ಲಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ಗಾಂಧಿನಗರದ ಕಪಾಲಿ ಮತ್ತು ಕೆಜಿ ರಸ್ತೆಯಸಂತೋಷ್ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ. ಮೆಜಿಸ್ಟಿಕ್ ಭಾಗದಲ್ಲಿ ಎರಡು ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳುತ್ತಿರುವ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಜೋಗಯ್ಯ ಪಾತ್ರವಾಗಲಿದೆ.

ಈ ಮಧ್ಯೆ ನಗರದ ಕೆಲವು ಚಿತ್ರಮಂದಿರದಲ್ಲಿ ಶಿವಣ್ಣ ಅವರ ಕಟ್ ಔಟ್ ಈಗಾಗಲೇ ಹಾಕಲಾಗಿದೆ. ಚಿತ್ರ ಇನ್ನು ಎಷ್ಟು ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ ಎಂಬ ವಿಷಯ ಇನ್ನೂ ಖಚಿತವಾಗಿಲ್ಲ. ಈಗಾಗಲೆ ಶಿವಣ್ಣನ ಅಭಿಮಾನಿಗಳಲ್ಲಿ ಜೋಗಯ್ಯ ಫೀವರ್ ಶುರುವಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada movie Jogayya got UA certificate from regional censor board. The entire cast and crew of the film is very happy about this piece of news. Hat Trick Hero Shivarajkumar lead movie is set to release on 19th August.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X