ದ್ವಾರಕೀಶ್ 'ವಿಷ್ಣುವರ್ಧನ' ಇಂದು ಬರಲಿಲ್ಲ ಯಾಕೆ?

ಯಾಕೆ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಸಿಗುತ್ತಿಲ್ಲ. ಕಾರಣ ಮುಂದಿನ ವಾರಕ್ಕೆ ಸಿಕ್ಕರೂ ಸಿಗಬಹುದಷ್ಟೇ. ಹಿರಿಯ ನಿರ್ಮಾಪಕ ಶೈಲೇಂದ್ರ ಬಾಬು ನಿರ್ಮಾಣ, ಅವರ ಮಗ 'ಸುಮಂತ್' ಸ್ಯಾಂಡಲ್ ವುಡ್ ಎಂಟ್ರಿಯ ಚಿತ್ರ "ಆಟ" ಬಿಡುಗಡೆ ಕೂಡ ಮುಂದಕ್ಕೆ ಹೋಯ್ತು. ಸಾಗರ್ ಥಿಯೇಟರಿನಲ್ಲಿ ಹಚ್ಚಿದ್ದ ಪೋಸ್ಟರ್ ಅಲ್ಲೇ ಆಟ ಆಡುತ್ತಿದೆ.
ಶಶಾಂಕ ನಿರ್ದೇಶನ, ವಿಜಯ್ ಅಭಿನಯದ ಚಿತ್ರ 'ಜರಾಸಂಧ' ಈ ವಾರ ಬಿಡುಗಡೆ ಆಗಬೇಕಿತ್ತು. ಅದೂ ಪೈಪೋಟಿಯ ಭಯದಿಂದ ಹಿಂದೆ ಸರಿಯಿತು. ಬಿಡುಗಡೆ ಆಗಬೇಕಾಗಿದ್ದ ಚಿತ್ರ ಬಿಡುಗಡೆ ಆಗಿಲ್ಲ. ಹೊಸಬರ ಚಿತ್ರ ಬರಲೇ ಇಲ್ಲ. ಹಾಗಾಗಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹೊಸ ಸಿನಿಮಾ ಇಲ್ಲದ ವಾರ, ಈ ಶುಕ್ರವಾರ. ಕೊನೆಗೆ ಉಳಿಯುವ ಪ್ರಶ್ನೆ, ಹೀಗೂ ಉಂಟೇ!
More from Filmibeat
English summary
Today (11-11-11) no kannada movie released. Dwarakish pruduction Vishnuvardhana and Shailendra produced Aata was in Race. But they are not released today.


Click it and Unblock the Notifications











