ಬೆಳಗಾವಿ ಬಾಲೆ ಲಕ್ಷ್ಮಿ ರೈಗೆ ಅವಕಾಶಗಳ ಸುರಿಮಳೆ
ಬೆಳಗಾವಿ ಬಾಲೆ ಲಕ್ಷ್ಮಿ ರೈ ಪಾಲಿಗೆ 2011ನೇ ವರ್ಷ ಸಂತಸವನ್ನೇ ತಂದಿದೆ. ಇದಕ್ಕೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಆಕೆಯ ಕೆರಿಯರ್ ಗ್ರಾಫ್‌ನಲ್ಲಿ ಸಾಕಷ್ಟು ಬದಲಾವಣೆಯ ರೇಖೆಗಳು ಕಂಡುಬರುತ್ತವೆ. ಆಕೆ ಅಭಿನಯದ ದ್ವಿಭಾಷಾ ಚಿತ್ರ 'ಕಾಂಚನ' ಭಾರಿ ಮಟ್ಟದಲ್ಲಿ ಯಶಸ್ಸು ಸಾಧಿಸಿದೆ.
ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಬಂದ 'ಕಾಂಚನಾ' ಚಿತ್ರದ ಯಶಸ್ಸು ಈಗ ಲಕ್ಷ್ಮಿ ರೈಗೆ ಅವಕಾಶಗಳ ಸುರಿಮಳೆಯನ್ನೇ ಗರೆದಿದೆ. ಈ ಚಿತ್ರದ ಯಶಸ್ಸಿನಿಂದ ಲಕ್ಷ್ಮಿ ರೈಗೆ ತೆಲುಗು ಮತ್ತು ತಮಿಳಿನ ಹಿರಿಯ ನಟರ ಜೊತೆ ಅಭಿನಯಿಸುವ ಚಾನ್ಸ್‌ಗಳು ಬರುತ್ತಿವೆಯಂತೆ.
ಕನ್ನಡದ 'ಕಲ್ಪನ' ಚಿತ್ರ ಸೇರಿದಂತೆ ಲಕ್ಷ್ಮಿ ರೈ ಕೈಯಲ್ಲಿ ಮಲಯಾಳಂನ 'ಕೋಬ್ರ', ತಮಿಳಿನ 'ಯೋಧ 2', ತೆಲುಗಿನ 'ಅಧಿನಾಯಕುಡು' ಸೇರಿದಂತೆ ಹಲವು ಚಿತ್ರಗಳಿವೆ. ಇತ್ತೀಚೆಗೆ ಲಕ್ಷ್ಮಿ ರೈ ಬಿಜಿಯಾಗಿರುವ ಕಾರಣ ತಮಿಳಿನ ಒಂದು ಚಿತ್ರವನ್ನು ಡೇಟ್ಸ್ ಹೊಂದಾಣಿಕೆಯಾಗದೆ ಒಲ್ಲೆ ಎಂದಿದ್ದರು. (ಒನ್‌ಇಂಡಿಯಾ ಕನ್ನಡ)
More from Filmibeat
English summary
After success of Kanchana, that was released in both Telugu and Tamil, the actress Lakshmi Rai getting big offers in Tollywood and Kollywood. She is now getting offers to pair up with some senior heroes.


Click it and Unblock the Notifications











