twitter
    For Quick Alerts
    ALLOW NOTIFICATIONS  
    For Daily Alerts

    ಗೀತಪ್ರಿಯರ ಬೆಳ್ಳಿಹೆಜ್ಜೆ ಗುರುತು ಹಿಡಿದು

    By *ವಿಕ ಸುದ್ದಿ ಲೋಕ
    |

    Lyricist Geetha Priya
    'ಮನೆಯಲ್ಲಿ ಬಡತನ. ಆಫೀಸ್ ಬಾಯ್ ಕೆಲಸಕ್ಕೆ ಟ್ರೈ ಮಾಡಿದರೂ ಸಿಗಲಿಲ್ಲ. ಕೊನೆಗೆ ಕಬ್ಬನ್ ಪಾರ್ಕ್ ರೆಸ್ಟೊರೆಂಟ್‌ನಲ್ಲಿ ಬಿಲ್ ಕಲೆಕ್ಟರ್ ಆಗಿ ಕೆಲ್ಸ ಸಿಕ್ಕಿತು. ಅಲ್ಲಿ ವಿಜಯ ಭಾಸ್ಕರ್ ಪರಿಚಯವಾದರು. ಅವರೊಂ ದಿಗೆ ನಾಟಕ ನೋಡಲು ಹೋಗುತ್ತಿದ್ದೆ. ಆ ನಂಟು ನನ್ನನ್ನು ಸಿನಿಮಾ ಲೋಕ ದಲ್ಲಿ ನಿರ್ದೇಶಕ, ಗೀತ ರಚನೆಕಾರ, ನಟನಾಗಿ ಮಾಡಿತು...'

    ಕರ್ನಾಟಕ ಚಲನಚಿತ್ರ ಅಕಾಡೆಮಿ ನಗರದಲ್ಲಿ ಶನಿವಾರ ಆಯೋಜಿಸಿದ್ದ 'ಬೆಳ್ಳಿ ಹೆಜ್ಜೆ-ದಿವ್ಯ ಚೇತನಗಳೊಡನೆ ಮುಖಾಮುಖಿ' ಮಾಲಿಕೆಯಲ್ಲಿ ಜನಪ್ರಿಯ ಗೀತ ರಚನೆಕಾರ ಗೀತಪ್ರಿಯ ತಮ್ಮ ಸಿನಿಮಾ ಬದುಕನ್ನು ಹಂಚಿಕೊಂಡಿದ್ದು ಹೀಗೆ.

    'ಚಿಕ್ಕವನಿರುವಾಗ ಕವಿತೆ ಬರೆಯುತ್ತಿದ್ದೆ. ಅಪ್ಪ ಕುದುರೆ ಸವಾರರಾಗಿದ್ದರು. ನನ್ನಸಾಹಿತ್ಯಾಸಕ್ತಿ ನೋಡಿದ ಅಪ್ಪ, ಬೆಳ್ಳಾವೆ ನರಹರಿ ಶಾಸ್ತ್ರಿಗಳ ಬಳಿ ಕರೆದೊಯ್ದು ,ಇವರು ನಿನಗೆ ಗುರುಗಳು ಅಂದರು. ವೈ.ವಿ. ರಾವ್ ಹಾಗೂ ವಿಜಯಭಾಸ್ಕರ್ ನನ್ನನ್ನು ಬೆಳೆಸಿದ ಗುರುಗಳು. ಹೋಟೆಲ್ ಕೆಲಸದಲ್ಲಿ 35 ರೂ. ಸಂಬಳ ಬರುತ್ತಿತ್ತು. 40 ರೂ. ಕೊಡುತ್ತೇನೆ; ನನ್ನ ಜತೆಗೇ ಇದ್ದುಬಿಡು ಎಂದು ವಿಜಯಭಾಸ್ಕರ್ ಹೇಳಿದರು.

    ಅವರೊಂದಿಗೆ ಮದ್ರಾಸ್‌ಗೆ ಹೋಗಿ, ಚಿತ್ರರಂಗದಲ್ಲಿ ಸಕ್ರಿಯನಾದೆ. ಅನೇಕ ಅವಕಾಶಗಳು ಬಂದವು. ಆರಂಭದಲ್ಲಿ ಹಾಡು ಬರೆದು ನಂತರ ನಟ, ನಿರ್ದೇಶಕನಾಗಿ ಅನೇಕ ಚಿತ್ರ ಮಾಡಿ ಯಶಸ್ಸು ಕಂಡೆ'. 'ನಿರ್ದೇಶಿಸಿದ ಬಹಳಷ್ಟು ಚಿತ್ರಗಳು ಹಿಟ್ ಆದವು. ಆದರೆ, ಜನತೆ ನನ್ನನ್ನು ಗೀತರಚನೆಕಾರ ಎಂದು ಗುರುತಿಸುತ್ತಾರೆಯೇ ಹೊರತು ನಿರ್ದೇಶಕ ಎಂದಲ್ಲ. ಜೀವನದಲ್ಲಿ ಬಹಳ ಕಷ್ಟ ಅನುಭವಿಸಿದವನು.

    ಈ ಅನುಭವದ ಹಿನ್ನೆಲೆಯಲ್ಲಿ ಅಂಥ ಹಾಡುಗಳನ್ನು ಬರೆದೆ. ಸಂಕಲನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೆ ಉತ್ತಮ ನಿರ್ದೇಶಕನಾಗಲು ಸಾಧ್ಯವಿಲ್ಲ. ಕಾದಂಬರಿಗಳನ್ನು ಸಿನಿಮಾ ಮಾಡುವುದು ಕೂಡಾ ಸವಾಲಿನ ಕೆಲಸ. ಸಿನಿಮಾದಲ್ಲಿ ಎಲ್ಲರೂ ಸಹಕಾರ ನೀಡುತ್ತಿದ್ದರು. ಹೀಗಾಗಿ, ಈ ಹಂತಕ್ಕೆ ಬೆಳೆದೆ' ಎಂದು ವಿವರಿಸಿದರು. ಅಕಾಡೆಮಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಉಪಸ್ಥಿತರಿದ್ದರು.

    Sunday, April 11, 2010, 11:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X