ಗೋಲ್ಡನ್ ಸ್ಟಾರ್ ಗಣೇಶ್ ಮದುವೆ ಮನೆಗೆ ಕೆ. ಮಂಜು!

Ganesh
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮದುವೆ ಮನೆ' ಚಿತ್ರಕ್ಕೆ ಗಂಡುಗಲಿ ಕೆ. ಮಂಜು ಜೊತೆಯಾಗಿದ್ದಾರೆ. ಅವರೇನು ಇದರಲ್ಲಿ ನಟಿಸುತ್ತಿಲ್ಲ, ಬದಲಾಗಿ ಇದರ ನಿರ್ಮಾಪಕ ರೆಹಮಾನ್ ಅವರಿಗೆ ಸಾಥ್ ಕೊಡುತ್ತಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ 5 ಕೋಟಿ ಹಣ ಹಾಕಿರುವ ರೆಹಮಾನ್ ಕೈ ಖಾಲಿಯಾಗಿದೆ. ಅದಕ್ಕೆ ಆಕಾಶ ನೋಡುತ್ತಾ ನಿಂತಿದ್ದ ರೆಹಮಾನ್ ಗೆ ಗೋಲ್ಡನ್ ಸ್ಟಾರ್, ಕೆ. ಮಂಜು ಸಾರಥ್ಯ ದೊರಕಿಸಿಕೊಟ್ಟಿದ್ದಾರೆ.

ಈಗ ಮದುವೆ ಮನೆ ಖರ್ಚು-ವೆಚ್ಚ ವಹಿಸಿಕೊಂಡಿರುವ ಕೆ. ಮಂಜು "ಗಣೇಶ್ ಹೇಳಿದ್ದರಿಂದ ಒಪ್ಪೊಕೊಂಡೆ. ರೆಹಮಾನ್ ಕೂಡ ಸೀನಿಯರ್ ಪ್ರೊಡ್ಯೂಸರ್. ಈಗಾಗಲೇ 'ಯಜಮಾನ', 'ಹುಚ್ಚ' ದಂತಹ ಹಿಟ್ ಚಿತ್ರಗಳನ್ನು ನೀಡಿರುವ ರೆಹಮಾನ್ 'ಯಜಮಾನ' ಚಿತ್ರದಿಂದ ಬರೋಬ್ಬರಿ 15 ಕೋಟಿ ಬಿಸಿನೆಸ್ ಮಾಡಿದ್ದರು. ಈಗ ಅದು 35 ಕೋಟಿ ರೂಪಾಯಿಗೆ ಸಮ. ಹಾಗಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಲು ನಿರ್ಧರಿಸಿದ್ದೇನೆ" ಎಂದಿದ್ದಾರೆ.

ಮದುವೆ ಮನೆ ಚಿತ್ರದ ನಿರ್ದೇಶಕ ಸುನಿಲ್ ಕುಮಾರ್ ಸಿಂಗ್ ಕೂಡ ಈ ಚಿತ್ರದ ಬಗ್ಗೆ ಒಳ್ಳೆಯ ಮಾತನ್ನಾಡುತ್ತಿದ್ದಾರೆ. 65 ದಿನಗಳಲ್ಲಿ ಮಾಡಿರುವ ಶೂಟಿಂಗ್ ನಲ್ಲಿ 17 ದಿನಗಳಷ್ಟು ಟ್ರೇನ್ ಎಪಿಸೋಡಿಗೇ ಮೀಸಲಾಗಿದೆ. ಗಣೇಶ್ ಇದರಲ್ಲಿ ಪ್ರಮುಖ ಆಕರ್ಷಣೆ! ಇದು ರಿಮೇಕ್ ಸಿನಿಮಾ ಅಲ್ಲ, ಆದರೆ ಫುಲ್ 'ಎಂಟರ್ಟೈನ್ ಮೆಂಟ್ ಪ್ಯಾಕೇಜ್' ಎಂದಿದ್ದಾರೆ. ಇವೆಲ್ಲಾ ಓಕೆ, ಎಲ್ಲಾ ಮಗಿದು ನಮಗೆ ಮದುವೆ ಊಟ ಯಾವಾಗ ಎಂಬುದು ಪ್ರೇಕ್ಷಕರ ಸದ್ಯದ ಪ್ರಶ್ನೆ!

More from Filmibeat

English summary
Super Hit Movie Yajamana Film Producer Rehman sought the support of producer cum distributor K Manju for the release of his film. After making and expensive rs.5 crore on ‘Madhuve Mane’ Rehman had no means and because of the request of golden star Ganesh the responsibility for further expenditure and distribution risk was taken by Gandugali K Manju.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X