ಚಿರಂಜೀವಿ ಮಗನಿಗೆ ರು.120 ಕೋಟಿ ವರದಕ್ಷಿಣೆ

By Rajendra

ಪ್ರಜಾರಾಜ್ಯಂ ಪಕ್ಷ ಹುಟ್ಟು ಹಾಕಿ ನಂತರ ಕಾಂಗ್ರೆಸ್ ಪಕ್ಷದ ಜೊತೆ ವಿಲೀನಗೊಳಿಸಿದ ಆಕ್ಟರ್ ಕಮ್ ಪೊಲಿಟೀಷಿಯನ್ ಮೆಗಾಸ್ಟಾರ್ ಚಿರಂಜೀವಿ ಕುಲಪುತ್ರ ರಾಮ್ ಚರಣ್ ತೇಜ ಮದುವೆಗೆ ಭಾರಿ ಸಿದ್ಧತೆಗಳು ನಡೆಯುತ್ತಿವೆ. ಮಗಧೀರ ಖ್ಯಾತಿಯ ರಾಮಚರಣ್ ತೇಜ ಮದುವೆ ಉಪಾಸನ ಕಾಮಿನೇನಿ ಜೊತೆ ಫಿಕ್ಸ್ ಆಗಿರೋದು ನಿಮಗೆ ತಿಳಿದಿರುವ ವಿಚಾರ.

ಇಲ್ಲಿ ವಿಷಯ ಏನಪ್ಪಾ ಅಂದರೆ, ರಾಮಚರಣ್‌ಗೆ 120 ಕೋಟಿ ರೂಪಾಯಿ ಲಿಕ್ವಿಡ್ ಕ್ಯಾಷ್ ಮತ್ತು ಸುಸಜ್ಜಿತ ಮಿನಿ ಫ್ಲೈಟ್ ಕೂಡಾ ಸಿಗಲಿದೆ ಎನ್ನುವುದೇ ತೆಲುಗು ಮಿಡಿಯಾ ಕಡೆಯಿಂದ ಬಂದಿರುವ ವರ್ತಮಾನ. ಇದನ್ನು ವರದಕ್ಷಿಣೆ ರೂಪದಲ್ಲಿ ನೀಡುತ್ತಿದ್ದಾರೋ ಅಥವಾ ಹಾಗೆಯೇ ಪ್ರೀತಿಯಿಂದ ನೀಡುತ್ತಿದ್ದಾರೋ ನಮಗದು ತಿಳಿಯದು.

ಅಪೋಲೋ ಆಸ್ಪತ್ರೆಯ ಸಂಸ್ಥಾಪಕ ಮತ್ತು ಚೈರ್ಮನ್ ಡಾ. ಪ್ರತಾಪ್ ರೆಡ್ಡಿ ಮೊಮ್ಮಗಳನ್ನು ರಾಮಚರಣ್ ವರಿಸುತ್ತಿರುವುದು. ಹೇಳಿ ಕೇಳಿ ಡಾ. ರೆಡ್ಡಿ ಭಾರೀ ಕುಳ. 120 ಕೋಟಿ ರೂಪಾಯಿ ಇವರಿಗೆಲ್ಲಾ ಯಾವ ಲೆಕ್ಕ? ಆದರೂ ವರದಕ್ಷಿಣೆ ರೂಪದಲ್ಲಿ ಇದನ್ನು ಕೊಟ್ಟರೆ ಮಹಿಳಾ ಸಂಘಟನೆಗಳಿಂದ ತೊಂದರೆ ಬಂದರೂ ಬರಬಹುದು ಎಚ್ಚರ!!

ಈ ಹಿಂದೆ ಊಸರವಳ್ಳಿ ಜ್ಯೂ.ಎನ್ಟಿಆರ್ ಮದುವೆ ಕೂಡ ಸಾಕಷ್ಟು ಸುದ್ದಿಯಾಗಿತ್ತು. ವರದಕ್ಷಿಣೆ ರೂಪದಲ್ಲಿ ಬರೋಬರಿ 500 ಕೋಟಿ ತೆಗೆದುಕೊಂಡಿರುವ ಸುದ್ದಿ ಕೂಡ ಚಾಲ್ತಿಯಲ್ಲಿತ್ತು. ಮದುವೆ ಸೂಟ್ ಅನ್ನು ಚಿನ್ನದಲ್ಲಿ ಹೋಲಿಸಿದ್ದ ಜ್ಯೂ.ಎನ್ಟಿಆರ್‌ಗಾರು ಇದಕ್ಕೆ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಕೋಟಿ ಕೋಟಿ ಬಂದಾಗ ಲಕ್ಷ ಅಲಕ್ಷ್ಯ ಅಂತೀರಾ? (ಏಜೆನ್ಸೀಸ್)

More from Filmibeat

English summary
Telugu actor Ramcharan Teja will be getting married to Upasana Kamineni, the 23-year-old grand daughter of Dr Prathap C Reddy, founder-chairman, Apollo Hospitals. Telugu media reports that the Appollo family is planning to give Rs 120 cr and a ultra modern mini flight to Ramcharan as marriage gift.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X