ಕೇರಳ ರಮಣೀಯ ತಾಣಗಳಲ್ಲಿ 'ಮೊದಲಸಲ'
ಕೇರಳ ಪ್ರವಾಸಿಗರ ಸ್ವರ್ಗ. ಅಲ್ಲಿನ ಒಂದೊಂದು ತಾಣಗಳನ್ನು ಬಣ್ಣಿಸಲು ಅಸಾಧ್ಯ. ಚಾಲ್‌ಕುಡಿ ಜಲಪಾತದ ವೈಭವನ್ನು ಹೊಗಳಲು ಪದಗಳೇ ಸಾಲದು. ಈ ಭವ್ಯ ಜಲಪಾತದ ಸನ್ನಿಧಿಯಲ್ಲಿ 'ಮೊದಲಾಸಲ" ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನದೆದಿದೆ. ತಾರಾ ಹಾಗೂ ರಂಗಾಯಣ ರಘು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಟಾಕೀಸ್ ರವರ ಚೊಚ್ಚಲ ಕಾಣಿಕೆಯಾದ 'ಮೊದಲಾಸಲ" ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ನೆರೆಯ ಕೇರಳದಲ್ಲಿ ಚಿತ್ರೀಕರಣ ಪೂರೈಸಿದ ಚಿತ್ರತಂಡ ಈಗ ಬೆಂಗಳೂರಿಗೆ ಹಿಂತಿರುಗಿದೆ.
ಕೇರಳದ ಸಾಕಷ್ಟು ರಮಣೀಯ ತಾಣಗಳಲ್ಲಿ ಅಲೆಪ್ಪಿ ಹಿನ್ನೀರು ಹಾಗೂ ಚತ್ತಿ ಬೀಚ್ ಕೂಡ ಪ್ರಮುಖವಾದವು. ಈ ಸುಂದರ ತಾಣಗಳಲ್ಲಿ, ವಿ.ನಾಗೇಂದ್ರಪ್ರಸಾದ್ ಬರೆದಿರುವ 'ಪ್ರಥಮ ಒಲವಾಗಮನ - ಪ್ರಥಮ ಕನಸಾಗಮನ" ಎಂಬ ಗೀತೆ ಚಿತ್ರೀಕರಣಗೊಂಡಿದೆ. ನಾಯಕ ಯಶ್ ಹಾಗೂ ನಾಯಕಿ ಭಾಮ ಅಭಿನಯಿಸಿದ ಈ ಗೀತೆಗೆ ಮುರುಳಿ ನೃತ್ಯ ಸಂಯೊಜಿಸಿದ್ದಾರೆ.
'ನವಗ್ರಹ", 'ಜೊತೆಜೊತೆಯಲಿ" ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದ ಮಲ್ಲಿಕಾರ್ಜುನ್ ಗದಗ ಪ್ರಥಮ ಬಾರಿಗೆ ಸಾಫ್ಟ್‌ವೇರ್ ಮಿತ್ರ ಯೋಗೀಶ್‌ನಾರಾಯಣ್ ಜೊತೆ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ಬೆನ್ನೆಲುಬಾಗಿ ವೆಂಕಟೇಶ್‌ನಾಯಕ್, ಜಗದೀಶ್ ಕಾಳಗಿ, ಮಯೂರ್ ಮತ್ತು ಮಹೇಶ್‌ಪಟೇಲ್ ನಿಂತಿದ್ದಾರೆ.
ಪುರುಷೋತ್ತಮ್ ಈ ಚಿತ್ರದ ನಿರ್ದೇಶಕರು. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ದೀಪು.ಎಸ್.ಕುಮಾರ್ ಸಂಕಲನ, ರವಿವರ್ಮ ಸಾಹಸ, ವಿ.ನಾಗೇಂದ್ರ ಪ್ರಸಾದ್ ಗೀತರಚನೆ, ದಿನೇಶ್ ಮಂಗಳೂರು ಕಲೆ ಹಾಗೂ ಶಶಿಧರ್ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯಶ್, ಭಾಮ, ರಂಗಾಯಣ ರಘು, ಅವಿನಾಶ್, ಶರಣ್, ತಾರಾ, ಯೋಗೀಶ್‌ನಾರಾಯಣ್, ರಾಕೇಶ್, ತಿಮ್ಮೇಗೌಡ ಮುಂತಾದವರಿದ್ದಾರೆ.


Click it and Unblock the Notifications











