ಈ ವಾರ ಐಂದ್ರಿತಾ, ಪ್ರಜ್ವಲ್ ನನ್ನವನು
ಮಾರ್ಕ್‌ವೆಲ್ ಸಂಸ್ಥೆ ಲಾಂಛನದಲ್ಲಿ ತುಳಸಿಗೋಪಾಲ್ ನಿರ್ಮಿಸಿರುವ 'ನನ್ನವನು' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ರಾಗ ಸಂಯೋಜಿಸಿರುವ ಈ ಚಿತ್ರದ ನಾಯಕನಾಗಿ ಪ್ರಜ್ವಲ್ ನಟಿಸಿದ್ದು ಐಂದ್ರಿತಾ ರೇ ನಾಯಕಿಯಾಗಿ ಅಭಿನಯಿಸಿದ್ದಾರೆ.
ಹಿಂದೆ 'ಸಂಗಾತಿ' ಚಿತ್ರವನ್ನು ನಿರ್ದೇಶಿಸಿದ ಶ್ರೀನಿವಾಸರಾಜು 'ನನ್ನವನು' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಕೆ.ದತ್ತು ಛಾಯಾಗ್ರಹಣ, ಸುರೇಶ್‌ಅರಸ್ ಸಂಕಲನ, ಥ್ರಿಲ್ಲರ್‌ಮಂಜು ಸಾಹಸ, ಎಂ.ಎಸ್.ರಮೇಶ್ ಸಂಭಾಷಣೆ, ನಾಗೇಂದ್ರಪ್ರಸಾದ್ ಗೀತರಚನೆ, ಹೊಸ್ಮನೆಮೂರ್ತಿ ಕಲಾನಿರ್ದೇಶನವಿದೆ.
ಚಿತ್ರದ ಉಳಿದ ತಾರಾಬಳಗದಲ್ಲಿ ಜಯಂತಿ, ಅವಿನಾಶ್, ಕಿಶೋರಿಬಲ್ಲಾಳ್, ಸತ್ಯಪ್ರಕಾಶ್, ದೊಡ್ಡಣ್ಣ, ಕೋಮಲ್, ಬ್ಯಾಂಕ್‌ಜನಾರ್ಧನ್, ಕಾಶಿ, ಮನದೀಪ್‌ರಾಯ್, ಜಿಮ್‌ರವಿ, ಹರೀಶ್, ವಿಶ್ವನಾಥ್, ಮಾಸ್ಟರ್ ರಾಕೇಶ್ ಮುಂತಾದವರಿದ್ದಾರೆ.
More from Filmibeat
ಐಂದ್ರಿತಾ ರೇ ನನ್ನವನು ಪ್ರಜ್ವಲ್ ದೇವರಾಜ್ ಶ್ರೀನಿವಾಸ ರಾಜು ದೊಡ್ಡಣ್ಣ ಅವಿನಾಶ್ aindrita ray nannavanu prajwal devaraj srinivasa raju doddanna avinash


Click it and Unblock the Notifications











