ಅಕ್ಟೋಬರ್ 18ಕ್ಕೆ ಪುನೀತ್ ಹೊಸ ಚಿತ್ರಕ್ಕೆ ಮುಹೂರ್ತ
ಅಕ್ಟೋಬರ್ 14ರಂದು ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ 'ಜಾಕಿ' ಚಿತ್ರ ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 18ರಂದು ಪುನೀತ್ ಅವರ ಮತ್ತೊಂದು ಚಿತ್ರಕ್ಕೆ ಮುಹೂರ್ತ ನಿಗದಿಪಡಿಸಲಾಗಿದೆ. ಈ ಚಿತ್ರವೂ ರಾಜ್ ಕುಟುಂಬದ ಸ್ವಂತ ನಿರ್ಮಾಣದ ಚಿತ್ರ.
ಇನ್ನೂ ಹೆಸರಿಡದ ಈ ಚಿತ್ರಕ್ಕೆ ಮಾದೇಶ ಆಕ್ಷನ್, ಕಟ್ ಹೇಳಲಿದ್ದಾರೆ. ತಮಿಳಿನ ಸೂಪರ್ ಹಿಟ್ ಚಿತ್ರ 'ನಾಡೋಡಿಗಳ್' ರೀಮೇಕ್ ಇದು. ಚಿತ್ರಕ್ಕೆ ನಾಯಕಿಯಾಗಿ ರಾಧಿಕಾ ಪಂಡಿತ್ ಅವರನ್ನು ಆಯ್ಕೆ ಮಾಡಲಾಗಿದೆ. ಯೋಗೀಶ್, ಶ್ರೀನಗರ ಕಿಟ್ಟಿ ಮತ್ತು ವಿಶಾಲ್ ಹೆಗಡೆ ಅವರು ವಿಶೇಷ ಪಾತ್ರಗಳಲ್ಲಿ ಕಾಣಿಸಲಿದ್ದಾರೆ.
ಅಕ್ಟೋಬರ್ 18ರಂದು ಮುಹೂರ್ತ ಮುಗಿಯುತ್ತಿದ್ದಂತೆ ಅಂದಿನಿಂದಲೇ ಚಿತ್ರೀಕರಣವೂ ಶುರುವಾಗಲಿದೆ. ಮೊದಲ ಹಂತದ ಚಿತ್ರೀಕರಣ ಹದಿನೈದು ದಿನಗಳ ಕಾಲ ನಡೆಯಲಿದೆ. ಏಳು ದಿನಗಳ ಚಿತ್ರೀಕರಣದಲ್ಲಿ ಪುನೀತ್, ರಾಧಿಕಾ ಪಂಡಿತ್ ಭಾಗದ ಚಿತ್ರೀಕರಣ ನಡೆಯಲಿದೆ ಎನ್ನುತ್ತವೆ ಮೂಲಗಳು.
More from Filmibeat
ಪುನೀತ್ ರಾಜ್ ಕುಮಾರ್ ನಾಡೋಡಿಗಳ್ ರೀಮೇಕ್ ರಾಧಿಕಾ ಪಂಡಿತ್ ಯೋಗೀಶ್ ಶ್ರೀನಗರ ಕಿಟ್ಟಿ puneeth rajkumar nadodigal remake radhika pandit yogish sreenagara kitty


Click it and Unblock the Notifications











