ಕೋಟೆಗೆ ಐಟಂ ರಾಣಿ ರಚನಾ ಮೌರ್ಯ ಲಗ್ಗೆ
ಸೃಷ್ಟಿಕರ್ತನ ಅಪೂರ್ವ ರಚನೆಯೇ ರಚನಾ ಮೌರ್ಯ! ಹನ್ನೆರಡನೆ ತರಗತಿಗೇ ವಿದ್ಯಾಭಾಸಕ್ಕೆ ತಿಲಾಂಜಲಿ ಇಟ್ಟ ನಟಿ. ಕನ್ನಡದ 12 ಪ್ಲಸ್ ಚಿತ್ರಗಳಲ್ಲಿ ಐಟಂ ರಾಣಿಯಾಗಿ ಕುಣಿದ ಮದನಾರಿ. ಈಗ ಪ್ರಜ್ವಲ್ ದೇವರಾಜ್ 'ಕೋಟೆ'ಗೆ ಲಗ್ಗೆ ಹಾಕಿದ್ದಾರೆ. ಐಟಂ ರಾಣಿ ಎಂದ ಮೇಲೆ ಐಟಂ ಹಾಡು ಇರಲೇಬೇಕಲ್ಲವೆ?
ಕೆ.ಕೆ ಫಿಲಂಸ್ ಲಾಂಛನದಲ್ಲಿ ಎಂ.ಮಂಜುನಾಥ್ ಅವರು ನಿರ್ಮಿಸುತ್ತಿರುವ 'ಕೋಟೆ' ಚಿತ್ರದ 'ನಾನು ನಾನೇನಾ ಇಲ್ಲಿ ನಾ ಬೇರೆಯವನ - ನೀನು ನನ್ನವ್ಳಾ ನೀ ಬೇರೆಯೋಳ' ಎಂಬ ಗೀತೆಗೆ ರಚನಾಮೌರ್ಯ ರವಿಶಂಕರ್ ಅವರೊಂದಿಗೆ ಸವದತ್ತಿ ಬಳಿಯ ತಲ್ಲೂರು ವಾಡೆಯಲ್ಲಿ ಹೆಜ್ಜೆ ಹಾಕಿದರು. ಯೋಗರಾಜ್‌ಭಟ್ ರಚನೆಯ ಈ ಗೀತೆಗೆ ಶಿವಶಂಕರ್ ನೃತ್ಯ ನಿರ್ದೇಶನ ಮಾಡಿದರು.
ಪ್ರಜ್ವಲ್‌ದೇವರಾಜ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವನ್ನು ಶ್ರೀನಿವಾಸರಾಜು ನಿರ್ದೇಶಿಸುತ್ತಿದ್ದಾರೆ. ಗಾಯಿತ್ರಿರಾವ್ ಹಾಗೂ ಡಿಂಪಲ್ ನಾಯಕಿಯರಾಗಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಶಿವಶಂಕರ್, ರವಿಶಂಕರ್, ರಚನಾಮೌರ್ಯ ಮುಂತಾದವರಿದ್ದಾರೆ.
ರಘುದೀಕ್ಷಿತ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಕೆ.ದತ್ತು ರವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ, ಯೋಗರಾಜ್‌ಭಟ್, ರಾಘವೇಂದ್ರ ಕಾಮತ್ ಹಾಗೂ ನಾಗೇಂದ್ರಪ್ರಸಾದ್ ಗೀತರಚನೆ, ಶಿವಶಂಕರ್, ಇಮ್ರಾನ್ ಮತ್ತು ಹರೀಶ್ ಪೈ ನೃತ್ಯ ನಿರ್ದೇಶನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಹಾಗೂ ಸುಧೀಂದ್ರ ಹೊಸಳ್ಳಿ ನಿರ್ಮಾಣ ನಿರ್ವಹಣೆ 'ಕೋಟೆ' ಚಿತ್ರಕ್ಕಿದೆ.


Click it and Unblock the Notifications











