ದೀಪಿಕಾ ಪಡುಕೋಣೆಗೆ ರಜನಿ ಹಲೋ ಹಲೋ
ಸೂಪರ್ ಸ್ಟಾರ್ ರಜನಿಕಾಂತ್ ಈಗ ಆರೋಗ್ಯದಿಂದಿದ್ದು, ತಮ್ಮ ಮುಂದಿನ ಚಿತ್ರ 'ರಾಣಾ' ಬಗ್ಗೆ ಗಮನಹರಿಸಿದ್ದಾರೆ. ಸದ್ಯಕ್ಕೆ ಅವರು ಇನ್ನೂ ಸಿಂಗಪುರದಲ್ಲೇ ಉಳಿದುಕೊಂಡಿದ್ದು, ಆದಷ್ಟು ಬೇಗನೆ ಭಾರತಕ್ಕೆ ಮರಳುವ ಯೋಚನೆಯಲ್ಲಿದ್ದಾರೆ.
ಇತ್ತೀಚೆಗೆ ಅವರು ರಾಣಾ ಚಿತ್ರದ ಕಲಾವಿದರು, ತಂತ್ರಜ್ಞರೆಲ್ಲರಿಗೂ ಫೋನ್ ಮಾಡಿ ತಾಜಾ ಮಾಹಿತಿಯನ್ನು ಪಡೆದಿದ್ದಾರೆ. ಚಿತ್ರದ ನಿರ್ದೇಶಕ ಕೆ ಎಸ್ ರವಿಕುಮಾರ್ ಸೇರಿದಂತೆ ಗೀತ ಸಾಹಿತಿ ವೈರಮುತ್ತು ಅವರಿಗೂ ಫೋನ್ ಮಾಡಿ ತಾವು ಬಣ್ಣ ಹಚ್ಚಿಕೊಳ್ಳಲು ಸಿದ್ಧರಿರುವುದಾಗಿ ಹೇಳಿದ್ದಾರೆ.
ವಿಶೇಷವಾಗಿ ಚಿತ್ರದ ನಾಯಕಿ ದೀಪಿಕಾ ಪಡುಕೋಣೆಗೆ ಫೋನ್ ಮಾಡಿ ರಾಣಾ ಚಿತ್ರಕ್ಕಾಗಿ ತಾವು ಡೇಟ್ಸ್ ಅಡ್ಜೆಸ್ಟ್ ಮಾಡಿಕೊಳ್ಳಬೇಕು ಎಂದು ವಿನಂತಿಸಿಕೊಂಡಿದ್ದಾರೆ. ರಜನಿ ಫೋನನ್ನು ನಿರೀಕ್ಷಿಸದ ದೀಪಿಕಾ ಸಖತ್ ಥ್ರಿಲ್ ಆಗಿದ್ದು ಡೇಟ್ಸ್ ಹೊಂದಾಣಿಕೆ ಮಾಡಿಕೊಂಡಿದ್ದು, ನೀವು ಕೇಳೋದು ಹೆಚ್ಚೋ ನಾವು ಕೊಡೋದು ಹೆಚ್ಚು ಎಂಬ ಭರವಸೆ ಮಾತುಗಳನ್ನು ಆಡಿದ್ದಾರೆ. (ಏಜೆನ್ಸೀಸ್)
More from Filmibeat
English summary
Recently Rajinikanth phoned Deepika Padukone and asked her to adjust her call sheets for Rana, which is expected to commence in September. Deepika was thrilled to hear from him and is said to have assured him that she would adjust her call sheets for Rana.
ದೀಪಿಕಾ ಪಡುಕೋಣೆ ರಜನಿಕಾಂತ್ ಬಾಲಿವುಡ್ ಆರೋಗ್ಯ ಸಿಂಗಪುರ rajinikanth deepika padukone bollywood health singapore


Click it and Unblock the Notifications











