ಜೂ.14ಕ್ಕೆ ರಜನಿಕಾಂತ್‌ಗೆ ಆಸ್ಪತ್ರೆ ವಾಸದಿಂದ ಬಿಡುಗಡೆ
ಇದೀಗ ಬಂದ ಮಾಹಿತಿ ಪ್ರಕಾರ, ಸೂಪರ್ ಸ್ಟಾರ್ ರಜನಿಕಾಂತ್ ಅವರು ಜೂ.14ರಂದು ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತೆಯಿಂದ ಬಿಡುಗಡೆಯಾಗಲಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ರಜನಿ ಭಾರತಕ್ಕೆ ಮರುಳುತ್ತಾರೆಯೇ ಇಲ್ಲವೆ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ.
ರಜನಿ ಅಭಿನಯದ ಮಹತ್ವಕಾಂಕ್ಷಿ ಚಿತ್ರ ರಾಣಾ ಚಿತ್ರೀಕರಣ ಮತ್ತೆ ಆರಂಭವಾಗಲಿದ್ದು, ಮೂಲಗಳ ಪ್ರಕಾರ ಆಗಸ್ಟ್ ತಿಂಗಳಲ್ಲೇ ರಾಣಾ ಚಿತ್ರೀಕರಣ ಭರದಿಂದ ಸಾಗಲಿದೆ ಎನ್ನಲಾಗಿದೆ. ರಜನಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವುದು ಅವರ ಅಭಿಮಾನಿಗಳನ್ನು ಸಂತಸದಲ್ಲಿ ತೇಲುವಂತೆ ಮಾಡಿದೆ.(ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
According to the latest information, superstar Rajinikanth will be discharged on June 14th from Singapore Hospital.


Click it and Unblock the Notifications











