ರಜನಿಕಾಂತ್, ರೇಖಾ, ಐಶ್ವರ್ಯ ರೈ ಬಟ್ಟೆ ಹರಾಜು

By Rajendra

ಸಿನಿಮಾ ತಾರೆಗಳು ಬಳಸಿದ ಷರ್ಟು, ಪ್ಯಾಂಟು, ಸೀರೆ, ರವಿಕೆಗಳನ್ನು (ಒಳಉಡುಪುಗಳು ಇಲ್ಲ ಎಂಬುದು ನಿಮ್ಮ ಗಮನಕ್ಕಿರಲಿ) ಸರ್ಕಾರಿ ಸವಾಲ್‌ನಲ್ಲಿ ಆಕ್ಷನ್‌ಗೆ ಇಡಲಾಗಿದೆ! ಅದರಲ್ಲೂ ಐಶ್ವರ್ಯ ರೈ, ಚಿರಯೌವನೆ ರೇಖಾ ಬಳಸಿದ ಬಟ್ಟೆಗಳಂತೂ ಹರಾಜಿನಲ್ಲಿ ಸೆನ್ಸೆಕ್ಸ್ ಸೂಚ್ಯಂಕದಂತೆ ಏರಿಕೆ ಕಂಡು ಕಡೆಗೆ ಅಭಿಮಾನಿಗಳ ವಾರ್ಡ್‌ರೋಬ್ ಸೇರುವುದು ಖಚಿತವಾಗಿದೆ.

ಚೆನ್ನೈನ ಪ್ರಮುಖ ಹೋಟೆಲ್‌ಗಳು ಈ ಹರಾಜು ಪ್ರಕ್ರಿಯೆ ನಡೆಸಲಿವೆ. ಭಾನುವಾರ (ಅ.9) ಚೆನ್ನೈನ ನಂದಮ್‌ಬಾಕಂನಲ್ಲಿ ಸಿನಿಮಾ ತಾರೆಗಳ ಬಟ್ಟೆಗಳನ್ನು ಸಂಗ್ರಹಿಸಲಾಯಿತು. ರಜನಿಕಾಂತ್, ಐಶ್ವರ್ಯ ರೈ, ರೇಖಾ, ತ್ರಿಷಾ, ಸುಹಾಸಿನಿ ಉದಾರ ಮನಸ್ಸಿನಿಂದ ತಮ್ಮ ಬಟ್ಟೆಗಳನ್ನು ದಾನವಾಗಿ ನೀಡಿದ್ದಾರೆ. ಹರಾಜಿನಲ್ಲಿ ಸಂಗ್ರಹವಾದ ಹಣವನ್ನು ದತ್ತಿನಿಧಿ ಸ್ಥಾಪಿಸಿ ಬಡಬಗ್ಗರಿಗೆ ನೀಡಲಾಗುತ್ತದೆ.

ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಟಿ ಶರ್ಟ್ ಬಿಚ್ಚಿ ಕೊಡುವುದರ ಜೊತೆಗೆ ಅದರ ಮೇಲೆ ತಮ್ಮ ಹಸ್ತಾಕ್ಷರವನ್ನು ಗೀಚಿ ಕೊಟ್ಟಿರುವುದು ವಿಶೇಷ. ನಟಿಯರಾದ ರೇಖಾ, ಐಶ್ವರ್ಯ ರೈ ತಮ್ಮ ವಾರ್ಡ್‌ರೋಬ್‌ನಿಂದ ತಂದ ಸೀರೆಗಳನ್ನು ಉದಾರ ಮನಸ್ಸಿನಿಂದ ದಾನ ಮಾಡಿದ್ದಾರೆ.

ತ್ರಿಷಾ ಹಾಗೂ ಸುಹಾಸಿನಿ ಮಣಿರತ್ನಂ ಕೂಡ ತಮ್ಮ ಬಟ್ಟೆಗಳನ್ನು ಉದಾರವಾಗಿ ದಾನ ಮಾಡಿದ್ದಾರೆ. ಇವರ ಬಟ್ಟೆಗಳನ್ನು ಜನಪ್ರಿಯ ಅಂತರ್ಜಾಲ ಮಾರಾಟ ತಾಣ ಇ ಬೇ ಮೂಲಕ ಹರಾಜು ಹಾಕಲಾಗುತ್ತದೆ. ಸಂಗ್ರಹವಾದ ಹಣವನ್ನು ದತ್ತಿನಿಧಿಗೆ ಸಮರ್ಪಿಸಲಾಗುತ್ತದೆ. Oriental Cuisines and Centre for Social Initiatives and Management (CSIM) ಸಂಸ್ಥೆ ಆಯೋಜಿಸಿದೆ. (ಏಜೆನ್ಸೀಸ್)

More from Filmibeat

English summary
Leading Chennai hotels are hosting a charity event, Battle of Buffet, where clothes donated by celebrities like Aishwarya Rai, Rekha and Rajinikanth will be auctioned. The Battle of Buffet will be organised by Oriental Cuisines and Centre for Social Initiatives and Management (CSIM) at the Chennai Trade Centre in Nandambakkam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X