ಆಸ್ಪತ್ರೆಯಿಂದ ಸೂಪರ್ ಸ್ಟಾರ್ ರಜನಿಕಾಂತ್ ಬಿಡುಗಡೆ
ಅನಾರೋಗ್ಯದಿಂದ ಬಳಲುತ್ತಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಚೆನ್ನ್ನೈನ ಸೇಂಟ್ ಇಸಬೆಲ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತೀವ್ರ ಜ್ವರ ಹಾಗೂ ಗಂಟಲೂತದಿಂದ ಬಳಲುತ್ತಿದ್ದ ಅವರು ಎರಡು ಬಾರಿ ಇದೇ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಈಗ ಅವರ ಆರೋಗ್ಯ ಸುಧಾರಿಸಿದ್ದು ಅವರನ್ನು ಬಿಡುಗಡೆ ಮಾಡಿದ್ದಾಗಿ ಆಸ್ಪತ್ರೆಯ ವೈದ್ಯ ಎಸ್ ಎನ್ ಸಾಯಿ ಕಿಶೋರ್ ತಿಳಿಸಿದ್ದಾರೆ.
ಇದ್ದಕ್ಕಿದ್ದಂತೆ ವಾಂತಿ ಕಾಣಿಸಿಕೊಂಡ ಕಾರಣ ರಜನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಅವರನ್ನು ಸಂಜೆಯೇ ಬಿಡುಗಡೆ ಮಾಡಲಾಗಿತ್ತು. ರಾಣಾ ಚಿತ್ರದ ಸೆಟ್ಸ್‌ನಲ್ಲಿ ತಿಂದ ಪರಿಣಾಮ ಹೀಗಾಗಿತ್ತು ಎನ್ನಲಾಗಿದೆ. ರಜನಿ ಆರೋಗ್ಯ ಸುಧಾರಿಸಿದ ಬಳಿಕ ಅವರ ತ್ರಿಪಾತ್ರಾಭಿನಯದ ಚಿತ್ರ ರಾಣಾ ಚಿತ್ರೀಕರಣ ನಡೆಯಲಿದೆ.
ರಜನಿಕಾಂತ್ ಅವರ ಆರೋಗ್ಯ ದಿಢೀರ್ ಎಂದು ಕೈಕೊಡಲು ಕಾರಣ ಅವರು ದಿಢೀರ್ ಎಂದು ಕುಡಿತ ಬಿಟ್ಟಿದ್ದೇ ಕಾರಣ ಎನ್ನುತ್ತವೆ ಮೂಲಗಳು. ಅದರ ಸಂಪೂರ್ಣ ಡೀಟೈಲ್ಸ್ ಇಲ್ಲಿದೆ ಓದಿ. ಈಗಷ್ಟೆ ಬಿಡುಗಡೆಯಾಗಿರುವ ರಜನಿಕಾಂತ್ ಅವರು ಆದಷ್ಟು ಬೇಗ ರಾಣಾ ಚಿತ್ರೀಕರಣಕ್ಕೆ ಮರಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. (ದಟ್ಸ್ ಕನ್ನಡ ಸಿನಿ ವಾರ್ತೆ)


Click it and Unblock the Notifications











