ರಂಗಪ್ಪ ಎಲ್ಲೂ ಹೋಗಿಲ್ಲ ಮಾತಿನ ಮನೆಯಲ್ಲಿ ಅವ್ನೆ

By Rajendra

ರಮೇಶ್ ಅರವಿಂದ್ ಅಭಿನಯದ 'ರಂಗಪ್ಪ ಹೋಗ್ಬಿಟ್ನಾ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನ ಸುತ್ತಮುತ್ತ ಚಿತ್ರಕ್ಕೆ ಮೂವತ್ತೈದು ದಿನಗಳ ಚಿತ್ರೀಕರಣ ನಡೆದಿದೆ. ಸದ್ಯದಲ್ಲೆ ಶ್ರೀಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಆರಂಭವಾಗಲಿದೆ.

ಎಲ್ಲಾ ಕಲಾವಿದ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರದ ಚಿತ್ರೀಕರಣವನ್ನು ನಿಗದಿತ ವೇಳೆಗೆ ಪೂರ್ಣಗೊಳಿಸಲು ಸಾಧ್ಯವಾಯಿತೆಂದು ಚಿತ್ರದ ನಿರ್ದೇಶಕ ಎಂ.ಎಲ್.ಪ್ರಸನ್ನ ತಿಳಿಸಿದ್ದಾರೆ. ಕಾನ್ಫಿಡೆಂಟ್ ಗ್ರೂಪ್ಸ್ ಅರ್ಪಿಸುವ, ಮಹೇಶ್ ಕೊಠಾರಿ ಹಾಗೂ ಬಿ.ಎಚ್.ಬಾಷಾ ರವರ ಆಶೀರ್ವಾದದೊಂದಿಗೆ ಶಾಂತಾ ಎಂಟರ್ ಪ್ರೈಸಸ್ ಮೂಲಕ ಎನ್.ರವಿಕುಮಾರ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.

ಹಾಸ್ಯಪ್ರಧಾನ ಈ ಚಿತ್ರದಲ್ಲಿ ರಮೇಶ್ ಜೊತೆ ಸಂಜನಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ತಾರಾಬಳಗದಲ್ಲಿ ರವಿಕಿರಣ್, ಮನದೀಪ್‌ರಾಯ್, ಸಿಹಿಕಹಿಚಂದ್ರು, ಸಾಧುಲಯೇಂದ್ರ ಮುಂತಾದವರಿದ್ದಾರೆ. ನಿರ್ದೇಶಕರೇ ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಎ.ಸಿ.ಮಹೇಂದರ್ ಛಾಯಾಗ್ರಹಣ ಮತ್ತು ಹರ್ಷ ರವರ ಸಂಕಲನವಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X