ಮೂರ್ಖರ ದಿನದಂದು ಸಂಜು ವೆಡ್ಸ್ ಗೀತಾ ಬಿಡುಗಡೆ
ಈಗಾಗಲೆ ಸುಮಧುರ ಹಾಡುಗಳ ಮೂಲಕ 'ಸಂಜು ವೆಡ್ಸ್ ಗೀತಾ' ಚಿತ್ರ ಜನಪ್ರಿಯವಾಗಿದೆ. ಲಕ್ಕಿ ಸ್ಟಾರ್ ರಮ್ಯಾ ಹಾಗೂ ಶ್ರೀನಗರ ಕಿಟ್ಟಿ ಅಭಿನಯದ ಈ ಚಿತ್ರ ಏಪ್ರಿಲ್ 1ರಂದು ತೆರೆಗೆ ಅಪ್ಪಳಿಸುತ್ತಿದೆ. ಸಂಜು ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕ ಪ್ರಮೋದ್ ನಾರಾಯಣ್ ಖಚಿತಪಡಿಸಿದ್ದಾರೆ.
ಈ ಹಿಂದೆ ಈ ಚಿತ್ರ ಮಾರ್ಚ್ 18ರಂದು ಬಿಡುಗಡೆ ಮಾಡಲು ನಿರ್ಮಾಪಕರು ತೀರ್ಮಾನಿಸಿದ್ದರು. ಆದರೆ ಚಿತ್ರಮಂದಿರಗಳ ಕೊರೆತೆ ಕಾರಣ ಏಪ್ರಿಲ್ 1ಕ್ಕೆ ಮುಂದೂಡಲಾಗಿದೆ. ನಾಗಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಬಹುದಿನಗಳ ಬಳಿಕ ಗೋಲ್ಡನ್ ಗರ್ಲ್ ರಮ್ಯಾ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಮಾರ್ಚ್ 10ರಂದು ಕೆಂಪೇಗೌಡ ಚಿತ್ರ ತೆರೆಗೆ ಬರುತ್ತಿರುವ ಕಾರಣ ಸಂಜು ವೆಡ್ಸ್ ಗೀತಾ ಹಿಂದೆಸರಿದಿದೆ.ಪ್ರಮೋದ್ ನಾರಾಯಣ್ ನಿರ್ಮಿಸುತ್ತಿರುವ ಚಿತ್ರದ ತಾರಾಬಳಗದಲ್ಲಿ ಸುಹಾಸಿನಿ, ಜೈಜಗದೀಶ್, ಅವಿನಾಶ್, ಶರಣ್, ಬುಲೆಟ್ ಪ್ರಕಾಶ್, ರಂಗಾಯಣ ರಘು, ಸಾಧುಕೋಕಿಲ ಮುಂತಾದವರಿದ್ದಾರೆ. ಸಂಗೀತ ಜೆಸ್ಸಿ ಗಿಫ್ಟ್.
More from Filmibeat
English summary
Golden girl Ramya and Srinagara Kitty lead movie Sanju Weds Geetha is hitting the screens on 1st April . The film was schedule to release on 18th March but sources reveal that there was a shortage of theaters due to the release of Sudeep's Kemp Gowda, hence the change.
ರಮ್ಯಾ ಶ್ರೀನಗರ ಕಿಟ್ಟಿ ಕೆಂಪೇಗೌಡ ಸುದೀಪ್ ಅವಿನಾಶ್ ಸುಹಾಸಿನಿ ramya srinagara kitty kempe gowda sudeep avinash suhasini


Click it and Unblock the Notifications











