For Quick Alerts
  ALLOW NOTIFICATIONS  
  For Daily Alerts

  ಯಾರು ಹಿತವರು ಈ ಮೂವರಲ್ಲಿ, ಹಾಸ್ಯ ಚಿತ್ರ

  By Staff
  |
  ಉದ್ಯಮಿ ಪಿ ಬಿ ಶ್ರೀನಿವಾಸ್ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ 'ಯಾರು ಹಿತವರು ಈ ಮೂವರಲ್ಲಿ?' ಎಂದು ಹೆಸರಿಟ್ಟಿದ್ದಾರೆ. ಈ ಹಿಂದೆ ಅವರು 'ಮುಸ್ಸಂಜೆ ಗೆಳತಿ' ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದರು. ಅವರ ಮಗಳು ಶಾಲಿನಿ ಆ ಚಿತ್ರದ ನಾಯಕಿಯಾಗಿದ್ದದ್ದು ವಿಶೇಷವಾಗಿತ್ತು.

  ಮಸ್ಸಂಜೆ ಗೆಳತಿ ಚಿತ್ರ ಸಿದ್ಧವಾಗಿದ್ದು ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ನಡುವೆಯೇ ಶ್ರೀನಿವಾಸ್ ಯಾರು ಹಿತವರು ಚಿತ್ರದ ಸಿದ್ಧತೆಯಲ್ಲಿದ್ದಾರೆ. ಯಾರು ಹಿತವರು...ಚಿತ್ರ ಶೇಕಡಾ ನೂರಕ್ಕೆ ನೂರರಷ್ಟು ಹಾಸ್ಯ ಚಿತ್ರವಂತೆ. ಪತಿ ಮತ್ತು ಮೂವರು ಪತ್ನಿಯರ ನಡುವಿನ ಹಾಸ್ಯ ಕಥಾಹಂದರವನ್ನು ಚಿತ್ರ ಒಳಗೊಂಡಿದೆ.

  ಈ ಚಿತ್ರದಲ್ಲಿ ಶ್ರೀನಿವಾಸ್ ರ ಮಗಳು ಶಾಲಿನಿ ಸಹ ಒಂದು ಪಾತ್ರ ನಿರ್ವಹಿಸುತ್ತಿದ್ದಾರಂತೆ. ಆದರೆ ಈ ಚಿತ್ರದಲ್ಲಿ ಪತ್ನಿಯಾಗಿ ಅಲ್ಲ ಶ್ರೀನಿವಾಸ್ ರ ಮಗಳಾಗಿ ಶಾಲಿನಿ ನಟಿಸಲಿದ್ದಾರೆ! ಸತ್ಯ ಘಟನೆಗಳನ್ನು ಆಧರಿಸಿ ಚಿತ್ರಕಥೆ ರಚಿಸಿದ್ದೇನೆ ಎನ್ನುತ್ತಾರೆ ಶ್ರೀನಿವಾಸ್.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X