ಮೀಸೆ ಹೊತ್ತ ಗಂಡು ಕೆಂಪೇಗೌಡ ಬಹುತೇಕ ಸಿದ್ಧ
ಮೀಸೆ ಹೊತ್ತ ಗಂಡು 'ಕೆಂಪೇಗೌಡ' ಬಹುತೇಕ ಸಿದ್ಧನಾಗಿದ್ದಾನೆ. ಚಿತ್ರದಲ್ಲಿ ಪ್ರಮುಖ ಆಕರ್ಷಣೆ ಸುದೀಪ್ ಪೊಗದಸ್ತಾದ ಮೀಸೆ. ತಮಿಳಿನಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ 'ಸಿಂಗಂ' ಚಿತ್ರದ ರೀಮೇಕ್ 'ಕೆಂಪೇಗೌಡ'. 'ಸಿಂಗಂ' ಚಿತ್ರದಲ್ಲಿ ಸೂರ್ಯ ಗೆಟಪ್ ಸಹ ಬಹುತೇಕ ಹೀಗೇ ಇತ್ತು. ದಕ್ಷ ಪೊಲೀಸ್ ಅಧಿಕಾರಿಯಾಗಿ ಅವರು ಮೀಸೆ ತಿರುವುತ್ತಿದ್ದರೆ ನೋಡುವುದೇ ಒಂದು ಆನಂದ.
'ಕೆಂಪೇಗೌಡ'ನಿಗೆ ಸುದೀಪ್ ಎಷ್ಟರ ಮಟ್ಟಿಗೆ ಜೀವ ತುಂಬಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಸದ್ಯಕ್ಕೆ ಡಿಐ (Digital Intermediary) ಅಳವಡಿಕೆ ಕಾರ್ಯ ನಡೆಯುತ್ತಿದ್ದು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ 'ಕೆಂಪೇಗೌಡ' ಬರಲಿದ್ದಾನೆ. ಸುದೀಪ್ ಅಭಿನಯಿಸುವುದರ ಜೊತೆಗೆ ಆಕ್ಷನ್, ಕಟ್ ಹೇಳಿರುವ ಚಿತ್ರ.
ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತವಾಗಿ ಮೂಡಿಬಂದಿದೆ ಎಂದು ಸುದೀಪ್ ತಿಳಿಸಿದ್ದಾರೆ. ಈ ಬಗ್ಗೆ ಅವರಿಗೆ ಮೆಚ್ಚುಗೆಯೂ ಇದೆ. ಹನ್ನೊಂದು ದಿನಗಳ ಕಾಲ ನಡೆದ ಕ್ಲೈಮ್ಯಾಕ್ಸ್ ಚಿತ್ರೀಕರಣ ವೇಳೆ ಸುದೀಪ್ ಗಾಯಗೊಂಡಿದ್ದರು. ಚಿತ್ರದ ಆರಂಭಿಕ ಹಾಡನ್ನು 400 ಮಂದಿ ನೃತ್ಯ ಗಾರರೊಂದಿಗೆ ಚಿತ್ರೀಕರಿಸಿರುವುದು ಚಿತ್ರದ ಮತ್ತೊಂದು ಹೈಲೈಟ್. [ಸುದೀಪ್]


Click it and Unblock the Notifications











