ರಜನಿಕಾಂತ್ ಅಷ್ಟು ದೊಡ್ಡವನಲ್ಲ ನಾನು; ಸುದೀಪ್

By Rajendra

'ಕೆಂಪೇಗೌಡ' ಚಿತ್ರದಲ್ಲಿನ ಸುದೀಪ್ ಅಭಿನಯ ಪ್ರೇಕ್ಷಕರ ಅಪಾರ ಮೆಚ್ಚುಗೆ ಪಾತ್ರವಾಗಿದೆ. ಚಿತ್ರದ ಹಾಡೊಂದರಲ್ಲಿ ಅವರು ಎಂಟು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದರು. ಈ ಹಾಡನ್ನು ವಿಭಿನ್ನವಾಗಿ ರೂಪಿಸುವಲ್ಲಿ ಸುದೀಪ್ ಅವರ ಶ್ರಮ ಎದ್ದು ಕಾಣುತ್ತಿತ್ತು.

ಈ ಹಾಡಿನ ಬಗ್ಗೆ ಈಗ ಚಿತ್ರೋದ್ಯಮದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ತಮಿಳು ಚಿತ್ರರಂಗದ ನಟ ರಜನಿಕಾಂತ್ ಅವರು ಶಿವಾಜಿ ಚಿತ್ರದ ಹಾಡಿನಲ್ಲಿ 13 ವಿಭಿನ್ನ ಕೇಶ ವಿನ್ಯಾಸಗಳಲ್ಲಿ ಅಭಿನಯಿಸಿದ್ದರು. 'ದಶಾವತಾರಂ' ಚಿತ್ರದಲ್ಲಿ ಕಮಲ್ ಹಾಸನ್ ಕೂಡ ಹತ್ತು ವಿಭಿನ್ನ ಗೆಟಪ್‌ಗಳಲ್ಲಿ ಮಿಂಚಿದ್ದರು. 'ಕಂದಸ್ವಾಮಿ' ಚಿತ್ರದಲ್ಲಿ ವಿಕ್ರಂ ಕೂಡ ಇದೇ ರೀತಿ ಅಭಿನಯಿಸಿ ಮೆಚ್ಚುಗೆ ಪಾತ್ರರಾಗಿದ್ದರು.

ಈ ಸಾಮ್ಯತೆಯನ್ನು ಗಮನಿಸಿ ಸಂದರ್ಶನವೊಂದರಲ್ಲಿ ಸುದೀಪ್ ಅವರನ್ನು ರಜನಿಕಾಂತ್ ಹಾಗೂ ಕಮಲ ಹಾಸನ್ ಅವರಿಗೆ ಹೋಲಿಸಲಾಯಿತು. ಇದನ್ನು ನಯವಾಗಿ ತಿರಸ್ಕರಿಸಿರುವ ಸುದೀಪ್, ನಾನು ಅವರಷ್ಟು ದೊಡ್ಡವನಲ್ಲ. ದಯವಿಟ್ಟು ನನ್ನನ್ನು ಅಂತಹ ಮಹಾನ್ ಕಲಾವಿದರಿಗೆ ಹೋಲಿಸಬೇಡಿ. ನಾನು ಇನ್ನೂ ಸಾಕಷ್ಟು ಹಾದಿ ಸವೆಸಬೇಕಾಗಿದೆ ಎಂದಿದ್ದಾರೆ.

More from Filmibeat

English summary
Top Kannada actor Sudeep requests media and his fans to stop comparing him with legends Rajini and Kamal Hassan. Please don't compare me with them. I am too small to be compared to what they have achieved. I still have a long road ahead of me.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X