For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದಲ್ಲಿ ತಮಿಳು ಚಿತ್ರ ವಿಜಯ ದುಂಧುಭಿ

  By Shami
  |

  ನಾಳೆ ಗುರುವಾರ '3ಈಡಿಯಟ್ಸ್' ಹಿಂದಿ ಚಿತ್ರದ ತಮಿಳು ವರಸೆ 'ನನ್ಬನ್' ಚಿತ್ರ ಕರ್ನಾಟಕ ರಾಜ್ಯಾದ್ಯಂತ ಏಕಕಾಲದಲ್ಲಿ ಬಿಡುಗಡೆಗೊಳ್ಳುತ್ತಿದೆ. ವಿಶೇಷವೆಂದರೆ, ಆರಾಧ್ಯದೈವ ವಿಜಯ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರದ ಒಂದು ಹಾಡಿನಲ್ಲಿ ಒಟ್ಟು 16 ಭಾಷೆಗಳಿಂದಾಯ್ದ 16 ಪದಗಳನ್ನು ಬಳಸಿಕೊಳ್ಳಲಾಗಿದೆ. Sweet Sixteen. ಸುದ್ದಿ ಅದಲ್ಲ.

  ಹದಿನಾರು ಭಾಷೆಯಿಂದ ಪದಗಳನ್ನು ಹೆಕ್ಕಿ ಹಾಡಿಗೆ ಸಾಹಿತ್ಯ ಹೆಣೆಯಲಾಗಿದೆಯಷ್ಟೆ. ಈ ಭಾಷೆಗಳ ಪಟ್ಟಿಯಲ್ಲಿ ಉತ್ತರದ ಹಿಂದಿ ಜೊತೆ ದಕ್ಷಿಣ ಭಾರತದ ಮೂರು ಭಾಷೆಗಳಿಗೆ ಸ್ಥಾನ-ಮಾನ ದಕ್ಕಿದೆ. ದಕ್ಷಿಣ ಭಾರತದ ಮೂರು ಭಾಷೆಗಳೆಂದರೆ ನಿಮ್ಮ ಪ್ರೀತಿಯ ತಮಿಳು, ತೆಲುಗು ಮತ್ತು ಮಲಯಾಳಂ.

  ತಮಿಳು ನಟ ವಿಜಯ್ ಗೆ ಬೆಂಗಳೂರಿನಲ್ಲಿ ಎಷ್ಟೊಂದು ಒಳ್ಳೆ ಮಾರುಕಟ್ಟೆ ಇದ್ದರೂ ಕನ್ನಡ ಪದವನ್ನು ಹಾಡಿನಲ್ಲಿ ಯಾತಕ್ಕೆ ತುರುಕಲಿಲ್ಲ ಎನ್ನುವುದು ನಿಗೂಢವಾಗಿದೆ. ರಾಜಧಾನಿ ಬೆಂಗಳೂರಲ್ಲದೆ ರಾಜ್ಯದ ಇತರ ಭಾಗಗಳಲ್ಲೂ ಚಿತ್ರರಸಿಕರನ್ನು ರಂಜಿಸಲು ವಿಜಯ್ ಚಿತ್ರ ಸನ್ನದ್ಧವಾಗಿದೆ. ಕನ್ನಡದ ನೆಲದಲ್ಲಿ ಇಷ್ಟೊಂದು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ "ಭಾಗ್ಯ" ತಮಿಳಿಗಲ್ಲದೆ ಇನ್ಯಾವ ಭಾಷೆಗುಂಟು?

  ಈ ಹಾಡಿನಲ್ಲಿ ಬಳಸಿಕೊಳ್ಳಲಾಗಿರುವ ಬಹುಭಾಷಾ ಪದಗಳ ಪಟ್ಟಿ ಉದ್ದ ಇದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ, ಟರ್ಕಿಷ್, ಸ್ಪ್ಯಾನಿಶ್, ಚೈನೀಸ್, ಜರ್ಮನ್, ಅರೇಬಿಕ್, ಇಂಗ್ಲಿಷ್ ಅಲ್ಲದೆ ಇನ್ನೂ ಆರು ಭಾಷೆಗಳ ಪದಗಳು ಸಂಗೀತಕ್ಕೆ ಸಾಹಿತ್ಯವಾಗಿದೆ.

  ಆಕಸ್ಮಾತ್, ಸದಭಿರುಚಿಯ ಕನ್ನಡ ಚಿತ್ರಗಳು ಬಂದರೂ ಇತರ ಭಾಷೆಗಳ ಚಿತ್ರಗಳನ್ನು ಚಪ್ಪರಿಸಿಕೊಂಡು ನೋಡುವ ಬಹಳಷ್ಟು ಕನ್ನಡಿಗರಿಗೆ ಈ ಮೇಲಿನ ಮಾಹಿತಿಗಳನ್ನು ಅರ್ಪಿಸಲಾಗಿದೆ. ಅಷ್ಟೇ ಹೊರತು, ನನ್ಬನ್ ಚಿತ್ರಕ್ಕೆ advertisement ಕೊಡುವುದು ಈ ಬರಹದ ಉದ್ದೇಶವಲ್ಲ.

  ಅಂದಹಾಗೆ, ಗಾಂಧಿನಗರದ ಅದಿತಿ ಎಂಟರ್ ಪ್ರೈಸಸ್ 'ನನ್ಬನ್' ಚಿತ್ರದ ಬೆಂಗಳೂರು ವಿತರಕರು. ನನ್ಬನ್ ಅಂದರೆ ಫ್ರೆಂಡು, ಫ್ರೆಂಡು ಅಂದರೆ ಸ್ನೇಹಿತ. ನನ್ಬನ್ ತಮಿಳು ಪದದ ಇಂಗ್ಲಿಷ್ ತರ್ಜುಮೆಗೆ ನನಗೆ ನೆರವಾದವರು ಜಯನಗರ ಮೊದಲನೇ ಬ್ಲಾಕ್ ಸಿದ್ದಾಪುರ ಕಾಲೋನಿಯ ಇಳಂಗೋವನ್.

  English summary
  Nanban' the Tamil version of Hindi movie 3 Idiots is all set for release all over Karnataka on Thursday 12th Jan. The highlight of 'Nanban' is a song lyric with 16 words picked from 16 languages. Hindi, Tamil, Telugu and Malayalam are the 4 Indian languages which have found place in the song lyrics. 'Nanban' means Friend in English, Snehita in Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X