twitter
    For Quick Alerts
    ALLOW NOTIFICATIONS  
    For Daily Alerts

    ನಾಗವಲ್ಲಿ ಖ್ಯಾತಿಯ ಸೌಂದರ್ಯ ಹೆಸರಲ್ಲಿ ಮಂದಿರ

    By Rajendra
    |

    ವಿಮಾನ ಅಪಘಾತದಲ್ಲಿ ದುರಂತ ಸಾವಪ್ಪಿದ ಬಹುಭಾಷಾ ತಾರೆ ಸೌಂದರ್ಯ ಚಿತ್ರರಸಿಕರನ್ನು ಅಗಲಿ ಎಂಟು ವರ್ಷಗಳೇ ಕಳೆದು ಹೋಗಿವೆ. ಆದರೆ ಅಭಿಮಾನಿಗಳ ಹೃದಯದಲ್ಲಿ ಆಕೆ ಇನ್ನೂ ಜೀವಂತವಾಗಿದ್ದಾರೆ. ಆಕೆಗೆ ಹೃದಯದಲ್ಲೇ ಮಂದಿರ ಕಟ್ಟಿ ಆರಾಧಿಸುವವರಿಗೂ ಕೊರತೆಯಿಲ್ಲ.

    ಸಿನಿಮಾ ತಾರೆಗಳಿಗೆ ಗುಡಿ ಗೋಪುರಗಳನ್ನು ಕಟ್ಟಿಸುವ ಅಭಿಮಾನಿ ದೇವರುಗಳು ಸಾಕಷ್ಟು ಮಂದಿ ಇದ್ದಾರೆ. ಕ್ಷೀರಾಭಿಷೇಕ, ಹೂವಿನ ಅಭಿಷೇಕ ಮಾಡಿ ತಮ್ಮ ಅಭಿಮಾನ ಮೆರೆಯುವುದು ಸಾಮಾನ್ಯ.ಈಗಾಗಲೆ ಹಲವು ತಾರೆಗಳಿಗೆ ಮಂದಿರಗಳನ್ನು ಕಟ್ಟಿಸಿ ತಮ್ಮ ಅಭಿಮಾನವನ್ನು ಮೆರೆದ ಅಭಿಮಾನಿಗಳು ಈಗ ಸೌಂದರ್ಯ ಹೆಸರಿನಲ್ಲೂ ಮಂದಿರ ಕಟ್ಟಿಸಲು ಮುಂದಾಗಿದ್ದಾರೆ.

    2೦೦4ರಲ್ಲಿ ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ದುರಂತ ಸಾವಪ್ಪಿದ್ದರು. 2012ರ ಏಪ್ರಿಲ್‌ಗೆ ಸೌಂದರ್ಯ ಚಿತ್ರರಸಿಕರನ್ನು ಅಗಲಿ ಎಂಟು ವರ್ಷಗಳಾಗುತ್ತವೆ. ಈ ನೆಪದಲ್ಲಿ ಆಕೆಯ ಕೆಲವು ಅಭಿಮಾನಿಗಳು 'ಸೌಂದರ್ಯ ಮಂದಿರ' ಕಟ್ಟಿಸಲು ಕೈಹಾಕಿದ್ದಾರೆ.

    ಬೆಂಗಳೂರಿನ ವಿಭೂಪಿಪುರ ಬಳಿ 'ಸೌಂದರ್ಯ ಮಂದಿರ' ನಿರ್ಮಾಣವಾಗಲಿದೆ. ಆದರೆ ಈ ಮಂದಿರದಲ್ಲಿ ಮಂಗಳಾರತಿ, ಪ್ರಸಾದ ಮತ್ತು ತೀರ್ಥ ವಿನಿಯೋಗ ಇರುವುದಿಲ್ಲ. ಇದಕ್ಕೆ ಬದಲಾಗಿ ಇಲ್ಲಿ ಆಕೆಯ ಭಾವ ಚಿತ್ರಗಳು, ವಿಗ್ರಹಗಳು ಇರುತ್ತವೆ. ಇದನ್ನು ಇನ್ನೊಂದು ರೀತಿ ಸ್ಮಾರಕ ಎಂದು ಕರೆಯಬಹುದು. (ಒನ್‌ಇಂಡಿಯಾ ಕನ್ನಡ)

    English summary
    The most talented actress Soundarya had suddenly died in a plane crash, It was way back in 2004 that she passed away but still there are huge number of fans for her in entire South. fans are planning to build a temple for Soundarya in Bangalore near Vibhudipura. They are naming it as 'Soundarya Mandira'
    Wednesday, January 11, 2012, 18:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X